HEALTH TIPS

ಚುನಾವಣಾ ಫಲಿತಾಂಶ: ಯಾರಿಗೂ ಖಾಲಿ ಚೆಕ್ ನೀಡಲಾಗುವುದಿಲ್ಲ:ಎನ್‍ಡಿಎ ನಿರ್ಣಾಯಕ ಶಕ್ತಿಯಾಗಲಿದೆ: ಕೆ. ಸುರೇಂದ್ರನ್

      

        ಕಾಸರಗೋಡು : ಚುನಾವಣಾ ಫಲಿತಾಂಶಗಳು ಬಹಿರಂಗಗೊಂಡಾಗ ಯಾರಿಗೂ ಖಾಲಿ ಚೆಕ್ ನೀಡಲಾಗುವುದಿಲ್ಲ ಎಂಬ ತೀರ್ಪು ಬರಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಮೇ 2 ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು ಯಾರಿಗೂ ಬಹುಮತ ಲಭಿಸದು.  ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು(ಎನ್.ಡಿ.ಎ) ಸ್ಥಾನಗಳು ಮತ್ತು ಮತಗಳಲ್ಲಿ ನಿರ್ಣಾಯಕವಾಗಿ ಹೊಮ್ಮಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

            ಈ ಮೊದಲು, ಚುನಾವಣೆಯ ಬಳಿಕ ನಾವು 100 ಸ್ಥಾನಗಳನ್ನೂ ಬಳಿಕ   80 ರಷ್ಟಾದರೂ ಸ್ಥಾನಗಳಲ್ಲಿ ಗೆಲುವಾಗುತ್ತದೆ ಎಂಬ ಹೇಳಿಕೆ ಇತ್ತು. ಆದರೆ, ಎನ್‍ಡಿಎಯ ಲೆಕ್ಕಾಚಾರದಂತೆ  ಈ ಬಾರಿ ಪರಿಸ್ಥಿತಿ ಬದಲಾಗಿದೆ ಎಂದು ತೋರಿಸುತ್ತದೆ ಎಂದು ಸುರೇಂದ್ರನ್ ಹೇಳಿದ್ದಾರೆ. ಧರ್ಮ ವಿಶ್ವಾಸಿಗಳ ಹೆಸರಲ್ಲಿ ನಾಲ್ಲು ಮತಗಳ ನಿರೀಕ್ಷೆ ರಿಸಿ ಸಿಪಿಎಂ ಮತ್ತು  ಇತರರು  ತಮ್ಮ ನಿಲುವನ್ನು ಬದಲಾಯಿಸುತ್ತಿದ್ದಾರೆ. ಪರಾಭವದ ಭಯದಿಂದ ಶಬರಿಮಲೆ ಸನ್ನಿಧಿಯ ತಮ್ಮ ನಿಲುವಲ್ಲಿ ಬದಲಾವಣೆರಯಾದಂತೆ ಮಂಗಳವಾರವಷ್ಟೇ ಮುಖ್ಯಮಂತ್ರಿ ಕಪಟ ಮಾತುಗಳನ್ನಾಡಿದ್ದಾರೆ.ಇದು ಜನರಿಗೆ ಎಸಗುವ ದ್ರೋಹವೆಂದು ಸುರೇಂದ್ರನ್ ತಿಳಿಸಿದರು. 

               ಹಿಂದೆಂದೂ ಇಲ್ಲದ ರೀತಿಯಲ್ಲಿ ಕೋಮು ಶಕ್ತಿಗಳ ಸಹಾಯದಿಂದ ಎಡ ಮತ್ತು ಬಲ ರಂಗಗಳು ಈ ಚುನಾವಣೆಯನ್ನು ಎದುರಿಸಿದ್ದವು ಎಂದು ಸುರೇಂದ್ರನ್ ಟೀಕಿಸಿದರು. ಎರಡೂ ಪಕ್ಷಗಳು ಎಸ್.ಡಿ.ಪಿ.ಐ ಮತ್ತು ಜಮಾತೆ-ಇ-ಇಸ್ಲಾಮಿ ಸೇರಿದಂತೆ ಎಲ್ಲಾ ಕೋಮು ಶಕ್ತಿಗಳ ಬೆಂಬಲವನ್ನು ಪಡೆದಿದ್ದವು. ಎರಡೂ ರಂಗಗಳು ಮುಸ್ಲಿಂ ಮತಕ್ಕಾಗಿ ಮರ್ಯಾದೆಯನ್ನೂ ಬಿಟ್ಟು ಪ್ಯಾಸಿಸ್ಟ್ ಗಳೊಂದಿಗೆ ಕಾರ್ಯವೆಸಗಿದವು. ಇದು ಪ್ರಜಾಪ್ರಭುತ್ವ ವಿರೋಧಿ ಉಗ್ರಗಾಮಿ ಶಕ್ತಿಗಳ ಬೆಂಬಲ ಪಡೆಯುವಲ್ಲಿವರೆಗೂ ವಿಸ್ತರಿಸಲ್ಪಟ್ಟಿತು. ಅಂತಹ ತಂಡಗಳ  ಒತ್ತಡಕ್ಕೆ ಮಣಿಯುವುದರಿಂದ ಕೇರಳದಲ್ಲಿ ದೊಡ್ಡ ಅನಾಹುತವಾಗಲಿದೆ ಎಂದು ಸುರೇಂದ್ರನ್ ಎಚ್ಚರಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries