ಮುಂಬೈ: ತೆರಿಗೆ ವಂಚನೆ ಆರೋಪದ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳು ಸ್ಥಗಿತಗೊಳಿಸಿರುವ ಚೀನಾದ ಕಂಪನಿ ಬೈಟ್‌ಡಾನ್ಸ್‌ಗೆ ತನ್ನ ಭಾರತೀಯ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಬಾಂಬೆ ಹೈಕೋರ್ಟ್‌ಅನುಮತಿ ನೀಡಿದೆ. .
ನ್ಯಾಯಮೂರ್ತಿಗಳಾದ ಎಸ್‌ಪಿ ದೇಶಮುಖ್ ಮತ್ತು ಅಭಯ್ ಅಹುಜಾ ಅವರ ನ್ಯಾಯಪೀಠ ಬೈಟ್‌ಡಾನ್ಸ್‌ಗೆ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ 78.91 ಕೋಟಿ ರೂ. ಠೇವಣಿ ಇಡುವುದು ಹಾಗೂ ಕಂಪನಿಯು ತನ್ನ ಇತರ ಭಾರತೀಯ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು, ಉಳಿದ ಹಣವನ್ನು ಬಳಸಿಕೊಳ್ಳಬಹುದು ಎಂದು ಹೇಳಿದರು.
ಬೈಟ್‌ಡಾನ್ಸ್ ತೆರಿಗೆಯನ್ನು ತಪ್ಪಿಸುತ್ತಿದೆ ಮತ್ತು ಅದರ ಜಿಎಸ್‌ಟಿ ಬಾಕಿಗಳನ್ನು ಪೂರ್ಣವಾಗಿ ಪಾವತಿಸಿಲ್ಲ ಎಂದು ಪರೋಕ್ಷ ತೆರಿಗೆ ಇಲಾಖೆ ಆರೋಪಿಸಿದೆ, ಕಳೆದ ವರ್ಷ ಭಾರತ ಸರ್ಕಾರ ನಿಷೇಧಿಸಿದ್ದ ಜನಪ್ರಿಯ ವಿಡಿಯೋ ಆಯಪ್ ಟಿಕ್‌ಟಾಕ್ ಅನ್ನು ಇದೇ ಕಂಪನಿ ನಿರ್ವಹಿಸುತ್ತಿತ್ತು. ಇದೀಗ ತನ್ನ ಮೇಲಿನ ಆರೋಪವನ್ನು ಸಂಸ್ಥೆ ನಿರಾಕರಿಸಿದೆ. ಎಲ್ಲಾ ತೆರಿಗೆ ವಂಚನೆ ಆರೋಪಗಳನ್ನು ನಿರಾಕರಿಸುವ ಮತ್ತು ಭಾರತದಲ್ಲಿ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ತಾತ್ಕಾಲಿಕಆದೇಶವನ್ನು ಪ್ರಶ್ನಿಸುವುದು ಸೇರಿದಂತೆ ವಿವಿಧ ಪರಿಹಾರಗಳನ್ನು ಕೋರಿ ಬೈಟ್‌ಡ್ಯಾನ್ಸ್ ಕಳೆದ ತಿಂಗಳು ಹೈಕೋರ್ಟ್ ಮೆಟ್ಟಿಲೇರಿತ್ತು.
ಮಂಗಳವಾರ, ಹೈಕೋರ್ಟ್ ಕಂಪನಿಗೆ 78.91 ಕೋಟಿ ರೂ., ತೆರಿಗೆ ಅಧಿಕಾರಿಗಳಿಗೆ ನೀಡಬೇಕಾಗಿರುವ ಮೊತ್ತವನ್ನು ಠೇವಣಿ ಇಡುವಂತೆ ನಿರ್ದೇಶಿಸಿತು.