ಕಾಸರಗೋಡು: ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಕೀಲ ಎಂ.ಸುಹಾಸ್ ಅವರ ಹದಿಮೂರನೇ ಸಂಸ್ಮರಣಾ ಸಮಾರಂಭವನ್ನು ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಸ್ಮøತಿ ದಿನವನ್ನಾಗಿ ಆಚರಿಸಲಾಯಿತು. ಬಿಎಂಎಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸುಹಾಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಿಎಂಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ವಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಸಂಘ ಚಾಲಕ್ ಅನಂತಪದ್ಮನಾಭ, ನಗರಸಂಘ ಚಾಲಕ್ ಕೆ.ಟಿ ಕಾಮತ್, ಪಿ.ಮುರಳೀಧರನ್, ಟಿ.ಕೃಷ್ಣನ್, ಶ್ರೀನಿವಾಸನ್, ಅನಿಲ್ ಬಿ.ನಾಯರ್, ಕೆ.ದಿನೇಶ್, ಪವಿತ್ರನ್ ಕೆ.ಕೆ ಪುರಂ, ಪಿ.ರಮೇಶ್, ಹರೀಶ್ ಕುದ್ರೆಪ್ಪಾಡಿ, ಸತೀಶ್ ದೇಳಿ ಮುಂತಾದವರು ಉಪಸ್ಥಿತರಿದ್ದರು.