HEALTH TIPS

ಛತ್ತೀಸ್ ಘಡ: ನಟೋರಿಯಸ್ ನಕ್ಸಲ್ ನಾಯಕ 'ಕೋಸಾ' ಎನ್ಕೌಂಟರ್ ನಲ್ಲಿ ಹತ

      ದಂತೇವಾಡ: ಛತ್ತೀಸ್ ಘಡದ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ 'ಕೋಸಾ' ಎಂಬಾತನನ್ನು ಭದ್ರತಾ ಪಡೆಗಳು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿವೆ.

      ಮಂಗಳವಾರ ಬೆಳಿಗ್ಗೆ ಛತ್ತೀಸ್ ಘಡದ ನೀಲವಾಯಾ ಅರಣ್ಯದಲ್ಲಿ ದಂತೇವಾಡ ಜಿಲ್ಲಾ ಮೀಸಲು ಪಡೆ ಕಾರ್ಯಾಚರಣೆ ನಡೆಸಿ ಎನ್ಕೌಂಟರ್ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಛತ್ತೀಸ್ ಘಡದ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ 'ಕೋಸಾ' ಹತನಾಗಿದ್ದಾನೆ ಎಂದು ತಿಳಿದುಬಂದಿದೆ. 

      ಈ ಬಗ್ಗೆ ಮಾಹಿತಿ ನೀಡಿರುವ ದಂತೇವಾಡ ಎಸ್‌ಪಿ ಅಭಿಷೇಕ್ ಪಲ್ಲವ್ ಅವರು, 'ದಂತೇವಾಡ ಡಿಆರ್‌ಜಿ (ದಂತೇವಾಡ ಡಿಸ್ಟಿಕ್ಟ್ ರಿಸರ್ವ್ ಗಾರ್ಡ್)ಯೊಂದಿಗೆ ಇಂದು ಬೆಳಿಗ್ಗೆ 6 ಗಂಟೆಗೆ ನೀಲವಾಯದ ಕಾಡಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮಾವೋವಾದಿ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿತ್ತು. ಮೃತ  ಮಾವೋವಾದಿಯನ್ನು ನಟೋರಿಯಸ್ ನಕ್ಸಲ್ ನಾಯಕ ಕೋಸಾ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

     ಅಂತೆಯೇ ಮೃತ ನಕ್ಸಲ್ ನಾಯಕ ಕೋಸಾ ಕಳೆದ 15 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಮೂಲತಃ ನೀಲವಾಯದ ಮಲ್ಲಪಾರ ನಿವಾಸಿಯಾಗಿದ್ದ ಕೋಸಾ ಪ್ರಸ್ತುತ ಮಲಂಗೀರ್ ಪ್ರದೇಶ ಸಮಿತಿ ಸದಸ್ಯನಾಗಿದ್ದ ಮತ್ತು ಮಿಲಿಟರಿ ಗುಪ್ತಚರ ಉಸ್ತುವಾರಿ ವಹಿಸಿದ್ದ. ಅಲ್ಲದೆ ಈತನ ವಿರುದ್ಧ  ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿದ್ದವು. ಈತನ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ಇಲಾಖೆ ಘೋಷಣೆ ಮಾಡಿತ್ತು ಎಂದು ಹೇಳಿದ್ದಾರೆ.

      ಅಲ್ಲದೆ ಘಟನಾ ಸ್ಥಳದಲ್ಲಿ ಒಂದು 9 ಎಂಎಂ ಪಿಸ್ತೂಲ್, ಒಂದು ದೇಶೀ ನಿರ್ಮಿತ ಭರ್ಮಾರ್,  3 ಕೆಜಿ ಐಇಡಿ ಸ್ಫೋಟಕ, ಪಿಥೂಸ್, ಔಷಧಿಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

     ಇದೇ ಏಪ್ರಿಲ್ ತಿಂಗಳ ಆರಂಭದಲ್ಲಿ ಛತ್ತೀಸ್ ಘಡದ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜುನಾಗಡದಲ್ಲಿ ನಕ್ಸಲರು ನಡೆಸಿದ್ದ ಭೀಕರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಬೆನ್ನಲ್ಲೇ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries