ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ವಿಷಯದಲ್ಲಿ ಅಮೆರಿಕಾ ಈಗಲೂ ಸಾವು ಬದುಕಿನ ನಡುವೆ ಸ್ಪರ್ಧೆಯಲ್ಲಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಹಾಗಾಗಿ ಕೊರೊನಾ ಸಾಂಕ್ರಾಮಿಕ ಪ್ರಸರಣ ತಡೆಗಟ್ಟಲು ಜನರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 75 ದಿನಗಳಲ್ಲಿ 150 ಮಿಲಿಯನ್ ಡೋಸ್ ವ್ಯಾಕ್ಸಿನೇಷನ್ ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು.
ಈ ಸಂಬಂಧ ವರ್ಜೀನಿಯಾದ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಡೆನ್ ಈ ವಿಷಯ ತಿಳಿಸಿದ್ದಾರೆ. ಬೈಡೆನ್ ಸರ್ಕಾರ 100 ದಿನಗಳಲ್ಲಿ 100 ಮಿಲಿಯನ್ ಡೋಸ್ ಲಸಿಕೆ ನೀಡುವ ಗುರಿ ಮೊದಲು ಹೊಂದಿತ್ತು. ಈಗ ಆ ಗುರಿಯನ್ನು 200 ಮಿಲಿಯನ್‌ಗೆ ನಿಗದಿಪಡಿಸಿಕೊಂಡಿದೆ. ಕೊರೊನಾ ವೈರಸ್ ವಿಷಯದಲ್ಲಿ ಅಮೆರಿಕಾ ಇನ್ನೂ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಉದ್ದೇಶಿತ ಗುರಿ ಸಾಧಿಸಲು ನಾವು ಸಾಕಷ್ಟು ಶ್ರಮಿಸಬೇಕಿದೆ.
ಪ್ರತಿಯೊಬ್ಬರಿಗೂ ಲಸಿಕೆ ನೀಡುವವರೆಗೆ ಎಲ್ಲರೂ ಸಾಮಾಜಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಜುಲೈ 4 ರೊಳಗೆ ಒಳ್ಳೆಯ ದಿನಗಳು ಬರಲಿವೆ. ಅಷ್ಟರೊಳಗೆ ಎಷ್ಟು ಜನರನ್ನು ಉಳಿಸಲಿದ್ದೇವೆ ಎಂಬುದು ಬಹಳ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಸರದಿ ಪಡೆದಾಗ ಲಸಿಕೆ ಪಡೆದುಕೊಳ್ಳಬೇಕು ಬೈಡನ್ ಮನವಿ ಮಾಡಿದ್ದಾರೆ.
ಏಪ್ರಿಲ್ 19 ರಿಂದ, ದೇಶಾದ್ಯಂತದ ಎಲ್ಲಾ ವಯಸ್ಕರು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಹೊಸ ಪ್ರಕರಣಗಳ ಹೆಚ್ಚಳ ಆಸ್ಪತ್ರೆಗಳಿಗೆ ಬರುವ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಬಿಡೆನ್ ವಿಷಾದ ವ್ಯಕ್ತಪಡಿಸಿದ್ದಾರೆ. ವಿಶ್ವದಲ್ಲೇ ಅಮೆರಿಕಾ ಅತಿ ಹೆಚ್ಚು 5,54,064 ಸಾವುಗಳು ಸಂಭವಿಸಿವೆ.