ಕಾಸರಗೋಡು: ವಿಧಾನಸಭೆ ಚುನಾವಣೆಯ ಮತಗಣನೆ ನಡೆಸುವ 3 ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮಂಗಳವಾರ ಭೇಟಿ ನೀಡಿದರು. ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಮತಗಣನೆ ಕೇಂದ್ರವಾಗಿರುವ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ವಿಧಾನಸಭೆ ಕ್ಷೇತ್ರದ ಮತಗಣನೆ ಕೇಂದ್ರವಾಗಿರುವ ಕಾಸರಗೋಡು ಸರಕಾರಿ ಕಾಲೇಜು, ಉದುಮಾ ವಿಧಾನಸಭೆ ಕ್ಷೇತ್ರದ ಮತಗಣನೆ ಕೇಂದ್ರವಾಗಿರುವ ಪೆರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಭೇಟಿ ನಿಡಿದರು. ಅಂಚೆ ಬಾಲೆಟ್, ಸೇವಾ ಮತಗಳು ಸಹಿತ ಮತಗಣನೆಯ ಸಿದ್ಧತೆಯನ್ನು ಅವರು ಅವಲೋಕನ ನಡೆಸಿದರು.
ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆನಾರ್ಂಡಿಸ್, ಜಿಲ್ಲಾ ಇನ್ ಪಾರ್ಮೆಟಿಕ್ ಅಧಿಕಾರಿ ಕೆ.ರಾಜನ್, ಆಯಾ ಪ್ರದೇಶಗಳ ಚುನಾವಣೆ ಅಧಿಕಾರಿಗಳು ಜತೆಗಿದ್ದರು.
ಮೇ 2ರಂದು ಮತಗಣನೆ ನಡೆಯಲಿವೆ. ಏ.21ರಂದು ಮಧ್ಯಾಹ್ನ 3 ಗಂಟೆಗೆ ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಮತಗಣನೆ ಕೇಂದ್ರವಾಗಿರುವ ತ್ರಿಕರಿಪುರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು ಕಾಞಂಗಾಡು ವಿಧಾನಸಭೆ ಕ್ಷೇತ್ರದ ಮತಗಣನೆ ಕೇಂದ್ರವಾಗಿರುವ ಪಡನ್ನಕ್ಕಾಡು ನೆಹರೂ ಕಾಲೇಜಿಗೆ ಜಿಲ್ಲಾಧಿಕಾರಿ ಭೇಟಿ ನೀಡುವರು.