HEALTH TIPS

ರೆಮ್ಡಿಸಿವಿರ್ ಮ್ಯಾಜಿಕ್ ಬುಲೆಟ್ ಅಲ್ಲ: ಏಮ್ಸ್ ಮುಖ್ಯಸ್ಥ

Top Post Ad

Click to join Samarasasudhi Official Whatsapp Group

Qries

Qries

           ನವದೆಹಲಿ: ಕೋವಿಡ್-19 ರೋಗಿಗಳಿಗೆ ನೀಡಲಾಗುವ ರೆಮ್ಡಿಸಿವಿರ್ ಔಷಧಕ್ಕೆ ಕೆಲವೆಡೆ ಕೊರತೆ ಉಂಟಾಗಿದೆ ಎಂಬ ವರದಿಗಳು ಪ್ರಕಟವಾಗುತ್ತಿರುವುದರ ನಡುವೆಯೇ ಏಮ್ಸ್ ನ ನಿರ್ದೇಶಕ ಡಾ. ರಣ್ ದೀಪ್ ಗುಲೇರಿಯಾ ರೆಮ್ಡಿಸಿವಿರ್ ಬಗ್ಗೆ ಮಾತನಾಡಿದ್ದಾರೆ.


       "ಒಂದು ವರ್ಷದ ಕೋವಿಡ್-19 ನಿರ್ವಹಣೆಯಲ್ಲಿ ಎರಡು ಪ್ರಮುಖ ಅಂಶಗಳನ್ನು ಅರಿತಿದ್ದೇವೆ. ಅದೇನೆಂದರೆ ಔಷಧ ಹಾಗೂ ಔಷಧದ ಟೈಮಿಂಗ್. ಅತಿ ಬೇಗ ಅಥವಾ ಅತೀ ವಿಳಂಬವಾಗಿ ಔಷಧ ನೀಡಿದರೆ ಅದು ಮನುಷ್ಯನಿಗೆ ಹಾನಿಯುಂಟಾಗಲಿದೆ. ಮೊದಲ ದಿನವೇ ಡ್ರಗ್ಸ್ ಕಾಕ್ಟೈಲ್ ನೀಡುವುದು ರೋಗಿಯನ್ನು ಸಾಯಿಸಬಹುದು ಹಾಗೂ ಇನ್ನೂ ಮಾರಕವಾಗಬಲ್ಲದು ಎಂದು ಡಾ. ರಣ್ ದೀಪ್ ಗುಲೇರಿಯಾ ತಿಳಿಸಿದ್ದಾರೆ.

          ಈ ಹಂತದಲ್ಲಿ ರೆಮ್ಡಿಸಿವಿರ್ ಔಷಧ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮಾಜಿಕ್ ಬುಲೆಟ್ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವೈರಾಣು ನಿವಾರಕ ಔಷಧ ಇಲ್ಲದೇ ಇರುವ ಕಾರಣದಿಂದ ನಾವು ಅದನ್ನು ಬಳಸಬಹುದು ಅಷ್ಟೇ. ರೋಗ ಲಕ್ಷಣಗಳೇ ಇಲ್ಲದಿದ್ದರೂ, ಸಣ್ಣ ಪ್ರಮಾಣದ ಲಕ್ಷಣಗಳನ್ನು ಹೊಂದಿರುವವರಿಗೆ ನೀಡಿದರೂ ಅದರಿಂದ ಪ್ರಯೋಜನವಾಗುವುದಿಲ್ಲ. ವಿಳಂಬ ಮಾಡಿ ನೀಡಿದರೂ ಅದರಿಂದ ಪ್ರಯೋಜನವಿಲ್ಲ ಎಂದು ಡಾ. ರಣ್ ದೀಪ್ ಗುಲೇರಿಯಾ ಹೇಳಿದ್ದಾರೆ.

       ಆಸ್ಪತ್ರೆಗೆ ದಾಖಲಾಗಿರುವವರು, ಆಮ್ಲಜನಕ ಕಡಿಮೆ ಇರುವವರು ಚೆಸ್ಟ್ ಎಕ್ಸ್ ರೇ, ಸಿಟಿ ಸ್ಕ್ಯಾನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡವರಿಗೆ ಮಾತ್ರ ನೀಡಬಹುದೆಂದು ಗುಲೇರಿಯಾ ತಿಳಿಸಿದ್ದಾರೆ.


Below Post Ad


ಜಾಹಿರಾತು














ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries