ತಿರುವನಂತಪುರ: ರಾಜ್ಯದಲ್ಲಿ ಪ್ರಸ್ತುತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಂದು ಕೊನೆಗೊಳ್ಳಲಿದೆ. ಕೋವಿಡ್ ವಿಸ್ತರಣೆಯ ಕಳವಳದ ಮಧ್ಯೆ ಪರೀಕ್ಷೆ ಕೊನೆಗೊಳ್ಳುತ್ತಿದೆ. ಕಟ್ಟುನಿಟ್ಟಾದ ಕೋವಿಡ್ ಮಾನದಂಡಗಳ ಪ್ರಕಾರ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ನಡೆಸಿ ಗಮನ ಸೆಳೆದಿದೆ.
ಕೋವಿಡ್ ತೀವ್ರಾವಸ್ಥೆಯ ಕಾರಣ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಂಡು ಪರೀಕ್ಷೆ ಪೂರ್ಣಗೊಂಡಿದೆ. 4,22,226 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂದು ಮೊದಲ ಭಾಷೆಯ ಭಾಗ ಎರಡರ ಪರೀಕ್ಷೆಯೊಂದಿಗೆ ಮುಕ್ತಾಯಗೊಂಡಿದೆ. ಮೌಲ್ಯಮಾಪನವು ಮೇ 14 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾರ್ಚ್‍ನಲ್ಲಿ ನಿಗದಿಯಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಮರು ನಿಗದಿಪಡಿಸಲಾಗಿತ್ತು. ಏಪ್ರಿಲ್‍ನಲ್ಲಿ ಕೋವಿಡ್ ತೀವ್ರವಾಗಿದ್ದರೂ, ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಪರೀಕ್ಷೆಯೊಂದಿಗೆ ಮುಂದುವರಿಯಿತು. ಜೊತೆಗೆ ವಿಶೇಷ ಭದ್ರತಾ ವ್ಯವಸ್ಥೆÀಯೊಂದಿಗೆ ಶಾಲೆಗಳಲ್ಲಿ ಯಶಸ್ವಿಯಾಗಿ ಪರೀಕ್ಷೆಗಳು ನಡೆದು ಮುಕ್ತಾಯಗೊಂಡಿದೆ. ಆದರೆ ಪ್ರಾಯೋಗಿಕ ಪರೀಕ್ಷೆ ಮುಂದೂಡಿರುವುದರಿಂದ ವಿದ್ಯಾರ್ಥಿಗಳಿಗೆ ಆ ಬಗೆಗಿನ ಆತಂಕಗಳು ಮುಂದುವರಿದಿದೆ.