ರಿಯಾದ್: ಸೌದಿ ಅರೇಬಿಯಾದ ಎಲ್ಲಿಯೂ ಚಂದ್ರ ಕಾಣಿಸಿಕೊಳ್ಳದ್ದರಿಂದ ಶಾಆಬಾಲ್ ತಿಂಗಳು ಪೂರ್ಣಗೊಂಡು ರಂಜಾನ್ ತಿಂಗಳ ಮೊದಲ ದಿನ ಗುರುವಾರ ನಿರೀಕ್ಷಿಸಲಾಗಿದೆ. ಅಧಿಕೃತ ಪ್ರಕಟಣೆ ಇಂದು ನಿರೀಕ್ಷಿಸಲಾಗಿದೆ.
ಸಾಮಾನ್ಯವಾಗಿ ಚಂದ್ರೋದಯ ಕಾಣಿಸಿಕೊಳ್ಳುವ ಸೌದಿ ಅರೇಬಿಯಾದ ಸುದೈರ್ ನಲ್ಲೂ ಮತ್ತು ತೈಫ್ ನಲ್ಲಿ, ಅನೇಕ ಜನರು ಅಮಾವಾಸ್ಯೆ ಕಳೆದು ಮೊದಲ ಚಂದ್ರೋದಯದ ನಿರೀಕ್ಷೆಯಲಿದ್ದರೂ ಎಲ್ಲಿಯೂ ಚಂದ್ರ ಕಾಣಿಸದ ಹಿನ್ನೆಲೆಯಲ್ಲಿ ಗುರುವಾರ ಆರಂಭಗೊಳ್ಳುವ ರಂಜಾನ್ ಒಂದನೇ ದಿನವೇ ಉಪವಾಸ ವೃತ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.
ಈ ಮಧ್ಯೆ ಭಾನುವಾರ ಚಂದ್ರ ದರ್ಶನ ಗೋಚರಿಸದಿರಬಹುದು ಎಂದು ಅಲ್ ಖಾಸಿಂ ವಿಶ್ವ ವಿದ್ಯಾನಿಲಯದ ಭೂಗೋಳ ಶಾಸ್ತ್ರ ಪ್ರಾಧ್ಯಾಪಕ ಡಾ. ಅಬ್ದುಲ್ಲಾ ಅಲ್ಮಿಸ್ನಾಡ್ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಸೂರ್ಯಾಸ್ತದ 29 ನಿಮಿಷಗಳ ಮೊದಲು ಚಂದ್ರನು ಅಸ್ತಮಿಸುತ್ತಾನೆ. ಅದರ ನಂತರ ಯಾವುದೇ ಚಂದ್ರೋದಯ ಇರುವುದಿಲ್ಲ. ಆದ್ದರಿಂದ ರಂಜಾನ್ ಉಪವಾಸ ಮಂಗಳವಾರ ಆರಂಭವಾಗಲಿದೆ. ಸುಪ್ರೀಂ ಕೋರ್ಟ್ ಮತ್ತು ರಾಯಲ್ ಕೋರ್ಟ್‍ನಿಂದ ಶೀಘ್ರದಲ್ಲೇ ನೋಟಿಸ್ ನೀಡಲಾಗುವುದು ಎಂದು ಅವರು ಹೇಳಿದರು.
ಭಾರತದಲ್ಲಿ ಗುರುವಾರದಿಂದಷ್ಟೇ ವೃತಾಚರಣೆ ಆರಂಭಗಳ್ಳುವ ಸಾಧ್ಯತೆ ಇದೆ.