ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನಿರ್ಚಾಲು ಘಟಕದ ದೈವಾರ್ಷಿಕ ಮಹಾಸಭೆ ಮತ್ತು 2021-23 ರ ಸಾಲಿನ ನೂತನ ಪಧಧಿಕಾರಿಗಳ ಆಯ್ಕೆ ಶುಕ್ರವಾರ ಘಟಕದ ಕಾರ್ಯಾಲಯದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಯಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಕೆ ಅಹಮ್ಮದ್ ಶೇರಿಫ್ ಮಹಾ ಸಭೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭೆಯಲ್ಲಿ ಹಿರಿಯ ವ್ಯಾಪಾರಿಗಳನ್ನು ಸನ್ಮಾನಿಸಲಾಯಿತು ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶಂಕರ ನಾರಾಯಣ ಮಯ್ಯ ಹಾಗೂ ವಿಕ್ರಂ ಪೈ ಕುಂಬಳೆ ಇವರು ಉಪಸ್ಥಿತರಿದ್ದು ಮಾಹಿತಿ ಮಾರ್ಗದರ್ಶನ ನೀಡಿದರು.
ಈ ಸಂದರ್ಭ ನಡೆದ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಎಂ.ಸುಬ್ರಹ್ಮಣ್ಯ ಭಟ್ ರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಯಾಗಿ ರವಿ ನೀರ್ಚಾಲು ಮತ್ತು ಕೊಶಾಧಿಕಾರಿಯಾಗಿ ಪ್ರಶಾಂತ್ ಪೈ, ಉಪಾಧ್ಯಕ್ಷರಾಗಿ ಸತ್ಯ ಶಂಕರ ಭಟ್, ನಾರಾಯಣ, ಜೊತೆ ಕಾರ್ಯದರ್ಶಿಗಳಾಗಿ ವಿಶ್ವನಾಥ ಶರ್ಮ, ಗೋಪಾಲ ಬಿ ಮತ್ತು 6 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.ನೂತನ ಸಮಿತಿಗೆ ಜಿಲ್ಲಾಧ್ಯಕ್ಷ ಅಹಮ್ಮದ್ ಶೆರೀಫ್ ಅಧಿಕಾರ ಹಸ್ತಾಂತರಿಸಿ ಶುಭಹಾರೈಸಿದರು. ಸಭೆಯಲ್ಲಿ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆಯಲಾಯಿತು. ಮಧ್ಯಾಹ್ನ ಭೋಜನ ನಂತರ ಆರಂಭಗೊಂಡ ಸಭೆಯಲ್ಲಿ ಘಟಕದ ಕಾರ್ಯದರ್ಶಿ ರವಿ ನೀರ್ಚಾಲು ಸ್ವಾಗತಿಸಿ, ಸತ್ಯ ಶಂಕರ ಭಟ್ ವಂದಿಸಿದರು.