ಕಣ್ಣೂರು: ಆರ್.ಎಸ್.ಎಸ್ ಕಾರ್ಯಕರ್ತನ ಮನೆಯ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಪಯ್ಯನ್ನೂರು ಖಂಡ ಕಾರ್ಯವಾಹ್ ಕೆ.ಎಂ.ಬಿಜು ಅವರ ಮನೆಗೆ ಬಾಂಬ್ ಎಸೆಯಲಾದ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು ಮನೆಯ ಅಂಗಳಕ್ಕೆ ಬಾಂಬ್ ಬಿದ್ದಿದೆ.
ಎರಡು ಬಾಂಬ್‍ಗಳನ್ನು ಎಸೆಯಲಾಗಿದ್ದು, ಬಾಂಬ್ ಸ್ಫೋಟಗೊಂಡ ಬಳಿಕ ಬೈಕ್‍ನಲ್ಲಿದ್ದ ಇಬ್ಬರು ಹಾದು ಹೋಗುತ್ತಿರುವುದನ್ನು ಕಂಡಿರುವುದಾಗಿ ಬಿಜು ಹೇಳಿರುವರು. ಮನೆಗೆ ಎಸೆಯಲು ಉದ್ದೇಶಿಸಿದ್ದರೂ ಮನೆಯ ಅಂಗಳಕ್ಕೆ ಬಿದ್ದಿರುವ ಕಾರಣ ಹೆಚ್ಚಿನ ಅಪಾಯವಾಗಿಲ್ಲ ಎಂದು ಬಿಜು ಹೇಳಿರುವರು.