ನವದೆಹಲಿ: ಸೇನಾ ಮಾಹಿತಿಯನ್ನು ವಿದೇಶಿ ಗುಪ್ತಚರ ಏಜೆನ್ಸಿಗೆ ನೀಡುತ್ತಿದ್ದ ಪಂಜಾಬ್ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೇನಾ ನಿಯೋಜನೆ ಕುರಿತ ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.
ಆರೋಪಿಯನ್ನು ಹರ್ಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ತರ್ನ್ ತರಾನ್ ನ ನಿವಾಸಿಯಾಗಿದ್ದಾನೆಂದು ತಿಳಿದುಬಂದಿದೆ.
"ತೀವ್ರಗಾಮಿ ವ್ಯಕ್ತಿಯೋರ್ವನನ್ನು ಸೇನಾ ಸೂಕ್ಷ್ಮ ಮಾಹಿತಿಗಳನ್ನು ವಿದೇಶಕ್ಕೆ ನೀಡಿದ ಕಾರಣಕ್ಕಾಗಿ ಬಂಧಿಸಲಾಗಿದೆ. ಭಾರತೀಯ ಸೇನಾ ಸಿಬ್ಬಂದಿ, ಸೇನಾ ಚಟುವಟಿಕೆ, ಸೇನಾ ಲೊಕೇಷನ್, ಗಡಿ ಭಾಗದಲ್ಲಿರುವ ಬಿಎಸ್‌ಎಫ್ ಪೋಸ್ಟ್ ಗಳು, ಬಂಕರ್ ಗಳ ಬಗ್ಗೆ ಮಾಹಿತಿ ರವಾನೆ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಕೃತ್ಯಕ್ಕಾಗಿ ಹವಾಲಾ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.