HEALTH TIPS

ಹೆಚ್ಚಳಗೊಳ್ಳುತ್ತಿರುವ ಕೋವಿಡ್: ನಾಳೆಯಿಂದ ಮತ್ತೆ ಬಿಗುಗೊಳ್ಳುತ್ತಿದ್ದೆ ನಿರ್ಬಂಧಗಳು: ಕಟ್ಟುನಿಟ್ಟಾದ ಪೋಲೀಸ್ ಪರಿಶೀಲನೆ

            ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ನಿಬಂಧನೆಗಳನ್ನು ಕಠಿಣಗೊಳಿಸಲಾಗುತ್ತಿದೆ. ನಾಳೆಯಿಂದ ಕಟ್ಟುನಿಟ್ಟಾದ ಪೋಲೀಸ್ ತಪಾಸಣೆ ನಡೆಯಲಿದೆ. ಮತದಾನ ಏಜೆಂಟರಿಗೆ ಕೊರೋನಾ ಪರೀಕ್ಷೆಯನ್ನು ನಡೆಸಲಾಗುವುದು. ಕೊರೋನಾ ಪೆÇ್ರೀಟೋಕಾಲ್ ನ್ನು ಕಟ್ಟುನಿಟ್ಟಾಗಿ ಅನುಸರಿಸಲು ಕೂಡಾ ಶಿಫಾರಸು ಮಾಡಲಾಗಿದೆ. ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಮತ್ತು ವ್ಯಾಕ್ಸಿನೇಷನ್ ತೀವ್ರಗೊಳಿಸಲಾಗುವುದು. ಚುನಾವಣಾ ಪ್ರಚಾರದ ಅಂಗವಾಗಿ ರಾಜ್ಯದ ಅನೇಕ ಭಾಗಗಳಲ್ಲಿ ಜನಸಂದಣಿಯ ಹಿನ್ನೆಲೆಯಲ್ಲಿ ನಿಬರ್ಂಧಗಳನ್ನು ಕಠಿಣಗೊಳಿಸಲಾಗುತ್ತಿದೆ.

         ತಿರುವನಂತಪುರ ಜಿಲ್ಲಾಧಿಕಾರಿ ಡಾ.ಎಸ್.ಕೆ. ನವಜೋತ್ ಖೋಸ್ಲಾ ಕೂಡ ಕೋವಿಡ್ ಎಚ್ಚರಿಕೆ ನೀಡಿದ್ದಾರೆ. ಮತದಾನ ಸಂಬಂಧಿ ಪ್ರಚಾರದಲ್ಲಿ ಭಾಗವಹಿಸಿದವರು ಮತ್ತು ಬೂತ್ ಏಜೆಂಟರು ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಲು ಸೂಚಿಸಲಾಗಿದೆ. ಪ್ರಚಾರ ಅಭಿಯಾನದ ಸಂದರ್ಭ ಕೆಮ್ಮು, ಜ್ವರ ಅಥವಾ ಇತರ ದೈಹಿಕ ಕಾಯಿಲೆಗಳನ್ನು ಅನುಭವಿಸುವವರನ್ನು ಎರಡು ದಿನಗಳಲ್ಲಿ ಪರೀಕ್ಷಿಸಬೇಕು. ಪರೀಕ್ಷೆಯು ನಕಾರಾತ್ಮಕವಾಗಿದ್ದರೂ ಸಹ ರೋಗಲಕ್ಷಣಗಳನ್ನು ಹೊಂದಿರುವ ಜನರು ಸ್ವಯಂ-ಪ್ರತ್ಯೇಕವಾಗಿರಬೇಕು ಎಂದು ಶಿಫಾರಸು ಹೇಳುತ್ತದೆ.

         ಎಸ್‍ಎಸ್‍ಎಲ್‍ಸಿ-ಪ್ಲಸ್ ಟು  ಪರೀಕ್ಷೆಗಳು ನಾಳೆಯಿಂದ À ಪ್ರಾರಂಭವಾಗಲಿವೆ. ಈ ಸಂದರ್ಭದಲ್ಲಿ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಮನೆಗಳಿಂದ ಪೋಷಕರು ಅಥವಾ ಸಂಬಂಧಿಕರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರೆ ಅಥವಾ ಸಂಬಂಧಿತ ಘಟನೆಗಳಲ್ಲಿ ಪಾಲ್ಗೊಂಡಿದ್ದರೆ ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ. ಚುನಾವಣಾ ದಿನದಂದು ಮತಗಟ್ಟೆಗಳಲ್ಲಿ ರಾಜಕೀಯ ಪಕ್ಷಗಳ ಏಜೆಂಟರಾಗಿದ್ದವರು ಕೂಡ ಎರಡು ದಿನಗಳೊಳಗೆ ಕಾಲ ಆರ್‍ಟಿಪಿಸಿಆರ್ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿರುವರು.

           ಜನದಟ್ಟಣೆಯ ಸಂದರ್ಭಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು. ವಯಸ್ಕರು ಮತ್ತು ಮಕ್ಕಳು ಅಗತ್ಯಕ್ಕಾಗಿ ಮಾತ್ರ ಹೊರಗೆ ಹೋಗಬೇಕು. ಜಿಲ್ಲೆಯ ಕೊರೋನಾ ನಿಯಮಗಳನ್ನು ಬಲಪಡಿಸಲು ವಲಯ ಮ್ಯಾಜಿಸ್ಟ್ರೇಟ್‍ಗಳು ಮತ್ತು ಪೋಲೀಸರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ತಮ್ಮ ಚಟುವಟಿಕೆಗಳು ಮತ್ತು ಸಲಹೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುವಂತೆ ಕೇಳಿಕೊಂಡರು. ಕೊರೋನಾ ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries