ನವದೆಹಲಿ: ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದ್ದು, ಪ್ರಯಾಣ ಮಾಡುವ ಯೋಚನೆಯಿದ್ದರೆ ಅದನ್ನು ಮುಂದೂಡಿ ಎಂದು ಹೇಳಿದೆ.
ಅಮೆರಿಕದ ಕಾಯಿಲೆ ನಿಯಂತ್ರಣ ಮಂಡಳಿ ಈ ಬಗ್ಗೆ ಸೂಚನೆ ನೀಡಿದ್ದು, ಭಾರತದಲ್ಲಿ ಕೋವಿಡ್ 19 ಪ್ರಕರಣ ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಹೀಗಾಗಿ ಅಲ್ಲಿಗೆ ಪ್ರಯಾಣ ಮಾಡದಿರುವುದು ಉತ್ತಮ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಏಪ್ರಿಲ್ 19ರಂದು ಮಂಡಳಿ ಸೂಚನೆ ನೀಡಿದ್ದು, ಲಸಿಕೆ ಕಾರ್ಯಕ್ರಮ ನಡೆಸಿದ್ದರೂ, ವೈಯಕ್ತಿಕವಾಗಿ ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಸೂಚನೆ ನೀಡಿದೆ.
ಹಾಗಿದ್ದೂ, ತೀರಾ ಅಗತ್ಯವಿದ್ದಲ್ಲಿ ಮಾತ್ರ ಲಸಿಕೆ ತೆಗೆದುಕೊಂಡು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಪ್ರಯಾಣ ಮಾಡಿ ಎಂದು ಹೇಳಿದೆ.