ತಿರುವನಂತಪುರ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಬಹಿರಂಗ ಪ್ರಚಾರದ ಕೊನೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ರಾಜಕೀಯ ಘರ್ಷಣೆಗಳು ಭುಗಿಲೆದ್ದವು. ಇಡುಕ್ಕಿ ಚೆರುತೋಣಿ ಯಲ್ಲಿ ಎಲ್‍ಡಿಎಫ್-ಯುಡಿಎಫ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಎಲ್‍ಡಿಎಫ್ ರ್ಯಾಲಿಗೆ ಕಾರ್ಯಕರ್ತರೊಬ್ಬರು ಕಾಂಗ್ರೆಸ್ ಧ್ವಜದೊಂದಿಗೆ ಬಂದಿದ್ದಾರೆ ಎಂಬ ಆರೋಪದ ಮೇಲೆ ಘರ್ಷಣೆ ನಡೆಯಿತು.
ಅಂತಿಮ ಪ್ರಚಾರ ಹಣಾಹಣಿಯ ಸಂದರ್ಭ ಮಾವೇಲಿಕರದಲ್ಲೂ ಘರ್ಷಣೆಗಳು ಸಂಭವಿಸಿದವು. ತಿರುವನಂತಪುರಂನ ನಯ್ಯಾಟಿಂಗರ ದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆಯಿತು. ಸಮಯ ಮೀರಿದರೂ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಚಾರವನ್ನು ಏಕೆ ನಿಲ್ಲಿಸಲಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದಾಗ ಘರ್ಷಣೆ ಭುಗಿಲೆದ್ದಿತು.
ಕೊಲ್ಲಂ ಅಂಚಲ್ ಕರುಕೋನ್ ನಲ್ಲಿ ಯುಡಿಎಫ್ ಮತ್ತು ಎಲ್‍ಡಿಎಫ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.