ಆಲಪ್ಪುಳ: ಆಲಪ್ಪುಳಾದ ಬಿಜೆಪಿ ಅಭ್ಯರ್ಥಿ ಸಂದೀಪ್ ವಾಚಸ್ಪತಿ ಮತ್ತು ಅವರ ಸಹೋದ್ಯೋಗಿಗಳಿಗೆ ಮಾರಣಾಂತಿಕ ಬೆದರಿಕೆ ಬಂದಿದೆ. ಪುನ್ನಪ್ರ-ವಯಲಾರ್ ಹುತಾತ್ಮರ ಸಭಾಂಗಣದಲ್ಲಿ ಪುಷ್ಪ ನಮನ ಸಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ಸಂದೀಪ್ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾರಣಾಂತಿಕ ಬೆದರಿಕೆಗಳು ಬಂದಿವೆ.
ಸಂದೀಪ್ ವಾಚಸ್ಪತಿಯ ಮುಖ್ಯ ಚುನಾವಣಾ ಏಜೆಂಟ್ ಮತ್ತು ಬಿಜೆಪಿ ಆಲಪ್ಪುಳ ಜಿಲ್ಲಾ ಸೆಲ್ ಸಂಯೋಜಕ ಜಿ. ವಿನೋದ್ ಕುಮಾರ್ ಅವರು ರಾಜ್ಯ ಪೋಲೀಸ್ ಮುಖ್ಯಸ್ಥ ಮತ್ತು ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. "ಪ್ರಶ್ನೆಗಳು ಬಂದಾಗ, ಉತ್ತರವು ಆಯುಧವಲ್ಲ" ಎಂದು ಸಂದೀಪ್ ತನ್ನ ವಿರುದ್ಧ ಮಾರಣಾಂತಿಕ ಬೆದರಿಕೆ ಹಾಕುತ್ತಿರುವವರಿಗೆ ಪೇಸ್ ಬುಕ್ ಪೋಸ್ಟ್ ಮೂಲಕ ಉತ್ತರಿಸಿರುವರು.
ಸಂದೀಪ್ ವಾಚಸ್ಪತಿ ಪುನ್ನಪ್ರ ವಯಲಾರ್ ಹುತಾತ್ಮರ ಸಭಾಂಗಣದಲ್ಲಿ ಮಾಲಾರ್ಪಣೆ ಮಾಡಿ ಘಟನೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಬಡ ಕಾರ್ಮಿಕರನ್ನು ಮೋಸಗೊಳಿಸಿದ ಮತ್ತು ಹುತಾತ್ಮರಾದ ಕಮ್ಯುನಿಸ್ಟರ ಕಥೆಯನ್ನು ಹುತಾತ್ಮರ ಸಭಾಂಗಣ ಹೇಳುತ್ತದೆ ಎಂದು ಸಂದೀಪ್ ವಾಚಸ್ಪತಿ ಹೇಳಿದ್ದರು. ನೂರಾರು ಹುತಾತ್ಮ ಕಾರ್ಮಿಕರಿಗೆ ಗೌರವ ಸಲ್ಲಿಸಲು ಬಂದಿದ್ದೇನೆ ಎಂದು ಸಂದೀಪ್ ಹೇಳಿದ್ದರು.
ಇದಕ್ಕೆ ಉತ್ತರಿಸದೆ ಸಿಪಿಎಂ ಸೈಬರ್ ಸೆಲ್ ಸಂದೀಪ್ ವಾಚಸ್ಪತಿಗೆ ಬೆದರಿಕೆ ಹಾಕುತ್ತಿದ್ದಾರೆ.