ತಿರುವನಂತಪುರ: ಅಯ್ಯೂರ್ ನಲ್ಲಿ ರೈಲು ದುರಂತ ಘಟಿಸಲು ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಚೆನ್ನೈ-ಗುರುವಾಯೂರ್ ಎಕ್ಸ್‍ಪ್ರೆಸ್ ಅನ್ನು ಅಪಘಾತಗೊಳಿಸಲು ಯತ್ನಿಸಲಾಯಿತೆಂದು ಮೂಲಗಳಿಂದ ತಿಳಿದುಬಂದಿದೆ. ಘಟನೆ ಕುರಿತು ಪೋಲೀಸರು ಮತ್ತು ರೈಲ್ವೆ ತನಿಖೆ ಆರಂಭಿಸಿದೆ.
ಘಟನೆ ನಿನ್ನೆ ರಾತ್ರಿ ನಡೆದಿದೆ. ರೈಲ್ವೆ ಹಳಿಗಳಲ್ಲಿ ತೆಂಗಿನ ಮರವನ್ನು ಪೇರಿಸಿಡುವ ಮೂಲಕ ರೈಲು ದುರಂತ ನಡೆಯಲು ಯತ್ನ ನಡೆಸಲಾಯಿತು. ಈ ಘಟನೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ದುರಂತವನ್ನು ತಕ್ಷಣ ತಪ್ಪಿಸಲಾಗಿದೆ.