ತಿರುವನಂತಪುರ : ಚುನಾವಣಾ ದಿನವಾದ ಇಂದು ಶಬರಿಮಲೆ ವಿಷಯದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ ಹೇಳಿಕೆ ಆಶ್ಚರ್ಯಕರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ. ಮತದಾನಗೈದ ಬಳಿಕ ಚಾಂಡಿ ಅವರು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಶಬರಿಮಲೆ ನಂಬಿಕೆಯು ಜಾತಿ ಮತ್ತು ಧರ್ಮವನ್ನು ಮೀರಿದೆ. ಈ ವಿಷಯದ ಬಗ್ಗೆ ಸರ್ಕಾರದ ಯು-ಟರ್ನ್ ಗೆ ಬದಲಾಗಿರುವುದು ಚುನಾವಣೆಯ ಬಗ್ಗೆ ಭಯದಿಂದ ಎಂದು ಉಮ್ಮನ್ ಚಾಂಡಿ ಹೇಳಿದರು.
ಆಚರಣೆಗಳ ಸಂರಕ್ಷಣೆಗೆ ಎನ್‍ಎಸ್‍ಎಸ್ ನ್ನೂ ಸಹ ವಿರೋಧಿಸಿದ್ದ ಸರ್ಕಾರ ಇದೀಗ ಭಯದಿಂದ ಟೂ ಟರ್ನ್ ಆಗುತ್ತಿದೆ ಎಂದು ಉಮ್ಮನ್ ಚಾಂಡಿ ಹೇಳಿದರು. ಅಫಿಡವಿಟ್ ಹಿಂಪಡೆಯಲು ಕೇಳಿದಾಗ ಸರ್ಕಾರ ನಕಾರಾತ್ಮಕ ಉತ್ತರ ನೀಡಿತ್ತು. ಶಬರಿಮಲೆಯ ವಿಷಯದಲ್ಲಿ ಸರ್ಕಾರ ಜನರಿಗೆ ಭಯಹುಟ್ಟಿಸುತ್ತಿದೆ. ಯುಡಿಎಫ್ ಅಧಿಕಾರಕ್ಕೆ ಬಂದರೆ, ಸಾಧ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಕೇರಳದ ಯಾವುದೇ ಆಚರಣೆ ಅನುಷ್ಠಾನಗಳಿಗೆ ಧಕ್ಕೆ ತರುವುದಿಲ್ಲ ಎಂದು ಉಮ್ಮನ್ ಚಾಂಡಿ ಹೇಳಿದರು.
ಮಹಿಳಾ ಪ್ರವೇಶದ ಪರವಾಗಿ ನ್ಯಾಯಾಲಯವು ಬಲವಾದ ನಿಲುವನ್ನು ತೆಗೆದುಕೊಂಡಿತು. ತೀರ್ಪನ್ನು ಸ್ವಾಗತಿಸಲಾಯಿತು. ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರಕ್ಕೆ ಇದೆ ಎಂದಿದ್ದ ಸರ್ಕಾರ ಮನೆ-ಮನೆಗಳಿಗೆ ತೆರಳಿ ಮಹಿಳೆಯರನ್ನು ಶಬರಿಮಲೆಗೆ ಕರೆದೊಯ್ದರು. ನವೋದಯದ ಹೆಸರಿನಲ್ಲಿ ಮಹಿಳೆಯರಿಗಾಗಿ ಗೋಡೆ ನಿರ್ಮಿಸಿ ಅದೇ ಸರ್ಕಾರ ಚುನಾವಣಾ ದಿನದಂದು ಇಂತಹ ನಿಲುವನ್ನು ತೆಗೆದುಕೊಳ್ಳುವುದು ಆಶ್ಚರ್ಯಕರವಾಗಿದೆ ಎಂದು ಉಮ್ಮನ್ ಚಾಂಡಿ ಹೇಳಿದರು.