ಬದಿಯಡ್ಕ: ವಿಧಾನ ಸಭಾ ಚುನಾವಣಾ ಪ್ರಚಾರ ಪ್ರಕ್ರಿಯೆಗಳಲ್ಲಿ ರಾಜಕೀಯ ಪಕ್ಷಗಳು ಬಿರು ಬಿಸಿಲನ್ನೂ ಲೆಕ್ಕಿಸದೆ ಉತ್ಸಾಹ ಭರಿತರಾಗಿ ತೊಡಗಿಸಿಕೊಂಡಿದ್ದು,ಕಾಸರಗೋಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನ್ಯಾಯವಾದಿ ಕೆ.ಶ್ರೀಕಾಂತ್ ಅವರ ಪ್ರಚಾರದ ಭಾಗವಾಗಿ ನಾಳೆ(ಶನಿವಾರ) ಬದಿಯಡ್ಕದಲ್ಲಿ ಆಯೋಜಿಸಲಾಗಿರುವ ರೋಡ್ ಶೋದಲ್ಲಿ ಕೇಂದ್ರ ಸಚಿವೆ ಸ್ಮøತಿ ಇರಾನಿ ಭಾಗವಹಿಸಲಿದ್ದು, ಕಾರ್ಯಕರ್ತರಲ್ಲಿ ಆವೇಶಕ್ಕೆ ಕಾರಣವಾಗಿದೆ.
ನಾಳೆ ಬೆಳಿಗ್ಗೆ 11 ಕ್ಕೆ ಬದಿಯಡ್ಕದ ಪಕ್ಷದ ಕಾರ್ಯಾಲಯ ಪರಿಸರದಿಂದ ಹೊರಡುವ ರೋಡ್ ಶೋವನ್ನು ಸ್ಮøತಿ ಇರಾನಿ ಉದ್ಘಾಟಿಸುವರು. ಬದಿಯಡ್ಕ ಪೇಟೆಯಲ್ಲಿ ಸಾಗಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಚಿವೆ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು.
ಅಪರಾಹ್ನ 2.30ಕ್ಕೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ಪೆರ್ಲದಲ್ಲಿ ನಡೆಯಲಿರುವ ಬೃಹತ್ ಸಮಾವೇಶವನ್ನು ಸಚಿವೆ ಸ್ಮøತಿ ಇರಾನಿ ಉದ್ಘಾಟಿಸಿ ಮಾತನಾಡುವರು. ಕರ್ನಾಟಕ, ಕೇರಳದ ಪ್ರಮುಖ ನಾಯಕರು ಪಾಲ್ಗೊಳ್ಳುವರು.