ಕಾಸರಗೋಡು: ಜನಜಾಗೃತಿ ಮೂಲಕ ಮಾತ್ರ ಕೋವಿಡ್ ಪೂರ್ಣ ನಿಯಂತ್ರಣ ಸಾಧ್ಯ. ಆದರೆ ಅದಕ್ಕಿರುವ ಸಮಯದ ಕೊರತೆಯ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳೊಂದಿಗೆ ರಂಗಕ್ಕಿಳಿಯುವ ಅನಿವಾರ್ಯತೆಯಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಆನ್ ಲೈನ್ ಮೂಲಕ ಭಾನುವಾರ ನಡೆದ ಸೆಕ್ಟರಲ್ ಮೆಜಿಸ್ಟ್ರೇಟ್ ಗಳ ಸಭೆಯಲ್ಲಿ ಅವರು ಮಾತನಾಡಿದರು.
ಕಾಸರಗೋಡು ಜಿಲ್ಲೆಯ ಆರೋಗ್ಯ ರಂಗದಲ್ಲಿ ಮಿತವಾದ ಸೌಲಭ್ಯಗಳಷ್ಟೇ ಇವೆ. ಆರೋಗ್ಯ ಕಾರ್ಯಕರ್ತರ ಸಂಖ್ಯೆಯಲ್ಲೂ ಮಿತಿಗಳಿವೆ. ಕೋವಿಡ್ ರೋಗಿಗಳನ್ನು ದಾಖಲಾತಿಗೊಳಿಸಿ ಚಿಕಿತ್ಸೆ ನೀಡುವಲ್ಲಿ ಒಟ್ಟು ಇರುವ 376 ಬೆಡ್ ಗಳಲ್ಲಿ ಈಗಾಗಲೇ 200 ಬೆಡ್ ಗಳಲ್ಲಿ ರೋಗಿಗಳು ದಾಖಲಾಗಿದ್ದಾರೆ. ಕೇವಲ 6 ಐ.ಸಿ.ಯು.ಬೆಡ್ ಗಳು ಜಿಲ್ಲೆಯಲ್ಲಿವೆ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಸ್ವಯಂ ಪ್ರೇರಣೆಯಿಂದ ನಡೆಯುವ ಮೂಲಕ ಮಾತ್ರ ಪೂರ್ಣರೂಪದಲ್ಲಿ ಕೋವಿಡ್ ನಿಯಂತ್ರಣ ನಡೆಸಬಹುದಾಗಿದೆ. ಸೆಕ್ಟರಲ್ ಮೆಜಿಸ್ಟ್ರೇಟ್ ಗಳು ಈ ನಿಟ್ಟಿನಲ್ಲಿ ಹೆಚ್ಚುವರಿ ಸಕ್ರಿಯತೆಯೊಂದಿಗೆ ರಂಗಕ್ಕಿಳಿಯಬೇಕು ಎಂದವರು ನುಡಿದರು. ರಾಜ್ಯ ಸರಕಾರದ ಅತಿ ನೂತನ ಆದೇಶ ಪ್ರಕಾರ ಮುಕ್ತ ಪ್ರದೇಶಗಳ ಸಾರ್ವಜನಿಕ ಸಮಾರಂಭಗಳಲ್ಲಿ 150 ಮಂದಿ, ಒಳಾಂಗಣ ಸಮಾರಮಘಳಲ್ಲಿ 75 ಮಂದಿ ಮಾತ್ರ ಭಾಗವಹಿಸಬಹುದು. ಸಮಾರಮಭ ನಡೆಸುವ ಮುನ್ನ ಅನುಮತಿ ಪಡೆಯುವ ನಿಟ್ಟಿನಲ್ಲಿ ಕೋವಿಡ್ ಜಾಗೃತಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಬೇಕಾದುದು ಅನಿವಾರ್ಯ ಎಂದವರು ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿರೋಧ ಚುರುಕಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಯಿತು. ಹೆಚ್ಚುವರಿ ದಂಡನಾಧಿಕಾರಿ ಅತುಲ್ ಸ್ವಾಮಿನಾಥ್ ಅಧ್ಯಕ್ಷತೆ ವಹಿಸಿದ್ದರು.