ಕಾಸರಗೋಡು: ನೀಲೇಶ್ವರ ನಗರಸಭೆಯ ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ನಗರಸಭೆ ಮಟ್ಟದಲ್ಲಿ ವ್ಯಾಪಾರ ಸಂಸ್ಥೆಗಳು ಭಾನುವಾರ ಪೂರ್ಣರೂಪದಲ್ಲಿ ಮುಚ್ಚುಗಡೆಗೊಳ್ಳಲಿವೆ. ಸಾರ್ವಜನಿಕರು ಗರಿಷ್ಠ ಮಟ್ಟದಲ್ಲಿ ತಮ್ಮ ನಿವಾಸಗಳಲ್ಲೇ ಉಳಿದುಕೊಳ್ಳುವಂತೆ ಆದೇಶ ನೀಡಲಾಗಿದೆ.
ನಗರಸಭೆ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳಗೊಳ್ಳುತ್ತಿದ್ದು, ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿವಾಹ, ಮರಣ, ಗೃಹಪ್ರವೇಶ, ಧಾರ್ಮಿಕ ಸಮಾರಂಭಗಳು ಇತ್ಯಾದಿಗಳನ್ನು ಕೋವಿಡ್ ಕಟ್ಟುನಿಟ್ಟುಗಳ ಕಡ್ಡಾಯ ಪಾನೆಯೊಂದಿಗಷ್ಟೇ ನಡೆಸಲು ಅನುಮತಿಯಿದೆ. ನಗರಸಭೆ ಮತ್ತು ಪೆÇಲೀಸರ ಮುಂಗಡ ಮಂಜೂರಾತಿ ಪಡೆದರೆ ಮಾತ್ರ ಸಮಾರಮಭಗಳನ್ನುನಡೆಸಬಹುದಾಗಿದೆ. ಉಳಿದ ದಿನಗಳಲ್ಲಿ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆ ವರೆಗೆ ಮಾತ್ರ ವ್ಯಾಪಾರ ಸಮಸ್ಥೆಗಳು ತೆರೆದು ಕಾರ್ಯಾಚರಿಸಬಹುದಾಗಿದೆ ಎಂದು ತಿಳಿಸಲಾಗಿದೆ. ವಾಕ್ಸಿನ್ ಲಭ್ಯತೆ ಅನುಸಾರ ನಗರಸಭೆ ವ್ಯಾಪ್ತಿ ಪ್ರದೇಶಗಳಲ್ಲಿ ವಾಕ್ಸಿನೇಷನ್ ಶಿಬಿರಗಳನ್ನು ನಡೆಸಲು ತೀರ್ಮಾನಿಸಲಾಗಿದೆ.