ಕಾಸರಗೋಡು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾದ್ಯಂತ ಕಟ್ಟುನಿಟ್ಟಿನ ಭದ್ರತೆ ಏರ್ಪಡಿಸಲು ಜಿಲ್ಲಾಡಳಿತ ತೀರ್ಮಾಣಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು, ಚುನಾವಣಾ ಖರ್ಚುವೆಚ್ಚ ನಿರೀಕ್ಷಕ ಸತೀಶ್‍ಕುಮಾರ್, ಸನ್‍ಜೋಯ್‍ಪೋಲ್ ಉಪಸ್ಥಿತಿಯಲ್ಲಿ ನಡೆದ ವಿಡಿಯೋ ಕಾನ್‍ಫರೆನ್ಸ್ ಮೂಲಕ ಸಂಬಂಧಪಟ್ಟವರಿಗೆ ಅಗತ್ಯ ಸೂಚನೆ ನೀಡಲಾಯಿತು.
ಸ್ಟ್ಯಾಟಿಕ್ ಸರ್ವೈಲೆನ್ಸ್ ಟೀಮ್, ಫ್ಲೈಯಿಂಗ್‍ಸ್ಕ್ವೇಡ್‍ನ ಚಟುವಟಿಕೆ ಚುರುಕುಗೊಳಿಸಲು ತೀರ್ಮಾನಿಸಲಾಯಿತು. ಇತರ ರಾಜ್ಯಗಳಿಂದ ಗುಂಪಾಗಿ ಮತದಾರರನ್ನು ಕರೆತರುವುದನ್ನು ತಡೆಯಲಾಗುವುದು. ಅನಧಿಕೃತವಾಗಿ ಹಣ, ಮದ್ಯ, ಆಯುಧ, ಮಾದಕದ್ರವ್ಯ ಸಾಗಾಟ ತಡೆಗೆ ಗಡಿಯಲ್ಲಿ ಸ್ಟ್ಯಾಟಿಕ್ ಸರ್ವೈಲೆನ್ಸ್ ಟೀವiನ್ನು ಎಲ್ಲಾ ಸಮಯದಲ್ಲೂ ಸಜ್ಜುಗೊಳಿಸಿಡಲಾಗುವುದು. ಜತೆಗೆ ಪ್ಲೈಯಿಂಗ್ ಸ್ಕ್ವೇಡ್‍ಗಳೂ ಕಾರ್ಯಾಚರಿಸಲಿದ್ದು, ಪೊಲೀಸ್, ಅರಣ್ಯ, ಅಬಕಾರಿ, ಮೋಟಾರು ವಾಹನ ಇಲಾಖೆ ಸಿಬ್ಬಂದಿಯನ್ನೂ ಗಡಿ ತಪಾಸಣೆಗೆ ನಿಯೋಜಿಸಲಾಗುವುದು ಎಂದೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.