ಕಾಸರಗೋಡು: ಕೋವಿಡ್-19 ಬಾಧಿತನಾಗಿದ್ದ ಅಪರಿಚಿತ ವ್ಯಕ್ತಿ ಕಾಸರಗೋಡು ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ವೈದ್ಯಧಿಕಾರಿ ತಿಳಿಸಿದರು.
ಸುಮಾರು 78 ವರ್ಷ ಪ್ರಾಯ ಅಂದಾಜಿಸಲಾಗಿದ್ದ ಈತ ತಮಿಳುಭಾಷೆ ಮಾತನಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕಾಸರಗೋಡು ನಗರದಲ್ಲಿ ಅಸ್ವಸ್ಥನಾಗಿ ಪತ್ತೆಯಾಗಿದ್ದ ಈ ವ್ಯಕ್ತಿಯನ್ನು ಪೆÇಲೀಸರ ಸಹಾಯದೊಂದಿಗೆ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ನಡೆಸಲಾದ ತಪಾಸಣೆಯಿಂದ ಈತನಿಗೆ ಕೋವಿಡ್ ಪಾಸಿಟಿವ್ ಖಚಿತಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಅಸಾಪ್ ಸಿ.ಎಫ್.ಎಲ್.ಟಿ.ಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅಸೌಖ್ಯ ಉಲ್ಭಣಾವಸ್ಥೆಗೆ ತಲಪಿದ ಹಿನ್ನೆಲೆಯಲ್ಲಿ ಪರಿಣತ ಚಿಕಿತ್ಸೆಗಾಗಿ ಸೋಮವಾರ ಟಾಟಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.