ಉಪ್ಪಳ: ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಪ್ರತಿಭಟನೆಯ ಬಳಿಕ ಕೊನೆಯ ಗಂಟೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಕನಿಯಾಲದ ಮತಗಟ್ಟೆಯಲ್ಲಿ ವಿವಾದ ಬಗೆಹರಿದಿದ್ದು, ಕೊನೆಯ ಕ್ಷಣದಲ್ಲಿ ಆಗಮಿಸಿದವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು.
ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯ ಕನಿಯಾಲ ಶಾಲಾ 130ನೇ ಸಂಖ್ಯೆ ಮನತಗಟ್ಟೆಯಲ್ಲಿ ಸಂಜೆ 6 ಬಳಿಕ ಆಗಮಿಸಿದ ಏಳು ಮಂದಿ ಮತದಾರರಿಗೆ ಮತ ಚಲಾಯಿಸಲು ಅನುಮತಿ ನಿರಾಕರಿಸಿದ ಮತಗಟ್ಟೆ ಅಧಿಕಾರಿಯ ಕ್ರಮದಿಂದ ಕುಪಿತರಾದ ಸುರೇಂದ್ರನ್ ಮತಗಟ್ಟೆಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು.