ತಿರುವನಂತಪುರ: ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ರಿಗೆ ಕೊರೋನಾ ದೃಢಪಡಿಸಲಾಗಿದೆ. ಸ್ಪೀಕರ್ ಅವರು ಸ್ವತಃ ಫೇಸ್ಬುಕ್ ಪೋಸ್ಟ್ ಮೂಲಕ ಸೋಂಕು ಖಚಿತಗೊಂಡ ಬಗ್ಗೆ ಮಾಹಿತಿ ನೀಡಿರುವರು. ಶ್ರೀ ರಾಮಕೃಷ್ಣನ್ ಅವರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರೊಂದಿಗೆ ಸಂಪರ್ಕದಲ್ಲಿದ್ದವರು ನಿರೀಕ್ಷಣೆಯಲ್ಲಿರಲು ತಿಳಿಸಲಾಗಿದೆ.
ಡಾಲರ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಅವರನ್ನು ಇಂದು ಬೆಳಿಗ್ಗೆ ಕಸ್ಟಮ್ಸ್ ಪ್ರಶ್ನಿಸಿದೆ. ಆ ಬಳಿಕ ಕೊರೋನಾ ದೃಢಪಡಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಶ್ನಿಸಿದ ಅಧಿಕಾರಿಗಳು ಸಹ ನಿರೀಕ್ಷಣೆಗೊಳಪಡಬೇಕಾಗುತ್ತದೆ.
ಡಾಲರ್ ಕಳ್ಳಸಾಗಣೆ ಮತ್ತು ಮನಿ ಲಾಂಡರಿಂಗ್‍ನಲ್ಲಿ ಸ್ಪೀಕರ್ ಭಾಗಿಯಾಗಿದ್ದಾರೆ ಎಂದು ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರತಿವಾದಿಗಳಾದ ಸ್ವಪ್ನಾ ಸುರೇಶ್ ಮತ್ತು ಸರಿತ್ ಸಾಕ್ಷ್ಯ ನೀಡಿದ್ದರು. ಈ ಆಧಾರದ ಮೇಲೆ ಶ್ರೀ ರಾಮಕೃಷ್ಣರನ್ನು ಪ್ರಶ್ನಿಸಲಾಯಿತು. ಕಸ್ಟಮ್ಸ್ ಸ್ಪೀಕರ್‍ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಮೊದಲು ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಈಬಾರಿ ಯಾವುದೇ ನೋಟೀಸ್ ನೀಡದೆ ಪ್ರಶ್ನಿಸಲಾಗಿದೆ.
ಏತನ್ಮಧ್ಯೆ, ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿರುವವರನ್ನು ಕೊರೋನಾ ದೃಢಪಡುತ್ತಿರುವುದು ವಿಪರ್ಯಾಸ. ಈ ಹಿಂದೆ ಮುಖ್ಯಮಂತ್ರಿಯ ಮುಖ್ಯ ಖಾಸಗಿ ಕಾರ್ಯದರ್ಶಿ ಸಿಎಂ ರವೀಂದ್ರನ್ ಅವರು ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೋರಿ ನೋಟಿಸ್ ನೀಡಿದ್ದಾಗಲೂ ಕೊರೊನಾ ಕಾರಣ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು.