ಕೊಚ್ಚಿ: ಕೇರಳದಲ್ಲಿ ಕೃಷಿ ಸಮೃದ್ಧಿಯ ದಿನವಾದ ವಿಷು ಆಚರಣೆಯೊಂದಿಗೆ ಭೂ ಸುಪೆÇೀಶಣ ಯಜ್ಞ ಕಾರ್ಯಕ್ರಮಗಳು ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ನೀಡುತ್ತಿವೆ. ಭೂ ಸುಪೆÇೀಶಣ ಕೇರಳದಾದ್ಯಂತ 10,000 ಕ್ಕೂ ಹೆಚ್ಚು ಭೂಮಿ ಪೂಜೆ ಮತ್ತು ಗೋಪೂಜನದೊಂದಿಗೆ ಪ್ರಾರಂಭವಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಮಂಗಳವಾರ ವಾರ್ಷಿಕ ದಿನಾಚರಣೆಗಳಿಗೆ ಸಂಬಂಧಿಸಿ ಭೂಮಿಯನ್ನು ರಕ್ಷಿಸುವ ಮತ್ತು ಫಲವತ್ತತೆಯನ್ನು ಮರಳಿ ತರುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭೂಮಿ ಪೂಜೆ ತಿರುವನಂತಪುರದಿಂದ ಕಾಸರಗೋಡವರೆಗಿನ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋ ಸ್ವಯಂ ಸೇವಾ ವಿಭಾಗ, ಗ್ರಾಮೀಣಾಭಿವೃದ್ಧಿ ವಿಭಾಗ ಮತ್ತು ಪರ್ಯಾವರಣ್ ವಿಭಾಗ ಮತ್ತು ವಿವಿಧ ಆಧ್ಯಾತ್ಮಿಕ ಸಂಸ್ಥೆಗಳ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಏಪ್ರಿಲ್ 13 ರಿಂದ ಜುಲೈ 23 ರವರೆಗೆ ಯೋಜಿಸಲಾಗಿದೆ.
ಭೂಮಿಯನ್ನು ರಕ್ಷಿಸಲು ಪ್ರತಿಯೊಬ್ಬ ವ್ಯಕ್ತಿಯು ತೆಗೆದುಕೊಳ್ಳಬೇಕಾದ ತುರ್ತು ಹೆಜ್ಜೆ ಇದು ಎಂದು ಗುರುತಿಸುವುದು ಮುಖ್ಯ ಉದ್ದೇಶ. ಸಾವಯವ ಮನುಷ್ಯ, ಸಾಂಪ್ರದಾಯಿಕ ಕೃಷಿ ಸಂಸ್ಕøತಿ, ವಿಷಕಾರಿಯಲ್ಲದ ಆಹಾರ ಮತ್ತು ಶುದ್ಧ ಗಾಳಿ ಮತ್ತು ನೀರನ್ನು ರಕ್ಷಿಸುವ ಏಕೈಕ ಮಾರ್ಗವೆಂದರೆ ಮಾನವರ ಮುಂದೆ ಸ್ವಯಂ ನಿಯಂತ್ರಣವನ್ನು ನಿರ್ವಹಿಸುವುದು ಎಂದು ಗುರುತಿಸುವಿಕೆಯ ಸಂದೇಶವಾಗಿದೆ ಎಂದು ಸಂಘಟಕರು ಹೇಳಿರುವರು.