ಕುಂಬಳೆ: ಕರ್ನಾಟಕ ಸರ್ಕಾರದ ಮುಜುರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಏಪ್ರಿಲ್ ತಿಂಗಳ 30 ರಿಂದ ಮೇ 1 ರ ವರೆಗೆ ನಡೆಯಬೇಕಿರುವ ಪ್ರತಿಷ್ಠಾ ಭ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಕುಂಬಳೆ ಕೋಟೆಕ್ಕಾರು ಸುವರ್ಣ ತರವಾಡು ಮನೆಯ ನೂತನ ಶ್ರೀ ಧೂಮಾವತಿ ದೈವಸ್ಥಾನದ ಮತ್ತು ಪರಿವಾರ ದೈವಗಳ ಆಲಯಗಳ ಕಾಮಗಾರಿಯನ್ನು ವೀಕ್ಷಿಸಿದರು. ತರವಾಡಿನ ಪ್ರಧಾನ ಅರ್ಚಕ ಅಮ್ಮು ಪೂಜಾರಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಸುವರ್ಣ ಅವರು ಸುವರ್ಣ ತರವಾಡು ಮನೆಯ ವತಿಯಿಂದ ಸಚಿವರನ್ನು ಸನ್ಮಾನಿಸಿದರು.