ಕಣ್ಣೂರು: ಪಂಪೂರುತಿಯಲ್ಲಿ ಸಿಪಿಎಂ-ಮುಸ್ಲಿಂ ಲೀಗ್ ಕಾರ್ಯಕರ್ತರ ಮಧ್ಯೆ ನಿನ್ನೆ ತೀವ್ರ ಘರ್ಷಣೆ ನqದಿದೆ. ಎರಡೂ ಪಕ್ಷಗಳ ಹಲವಾರು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಬೃಹತ್ ಭದ್ರತೆ ಖಾತ್ರಿಪಡಿಸಲಾಗಿದೆ.
ಈ ದಾಳಿಯನ್ನು ಮೊದಲು ಸಿಪಿಎಂ ಕಾರ್ಯಕರ್ತರು ನಡೆಸಿದ್ದಾರೆ ಎಂದು ಲೀಗ್ ಆರೋಪಿಸಿದೆ. ಆದರೆ, ಅಭ್ಯರ್ಥಿಯ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಅಸಮಾಧಾನದಿಂದ ಲೀಗ್ ತೊರೆದು ಸಿಪಿಎಂಗೆ ಸೇರಿದವರು ಲೀಗ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ.