HEALTH TIPS

ಹೊಸಬೆಟ್ಟಲ್ಲಿ ಸಂಪನ್ನಗೊಂಡ ತುಳು ತುಲಿಪು--ಬದ್ಕ್ ಗೊಂಜಿ ಕೈತುಡರ್: ಅರಿವಿನ ವಿಸ್ತಾರತೆ ಬೆಳೆಯಬೇಕು: ಒಡಿಯೂರು ಶ್ರೀ

     

          ಮಂಜೇಶ್ವರ: ಪ್ರತಿಯೊಬ್ದಬ ವ್ಯಕ್ತಿಯ ಅಂತರಂಗದ ಚಕ್ಷುವಿಗೆ ಗೋಚರವಾಗುವ ವಿಚಾರಗಳು ಸತ್ಪಥವನ್ನೇ ತೋರಿಸಿಕೊಡುತ್ತದೆ. ಆದರೆ ಅದನ್ನು ಅರ್ಥೈಸುವ ಅರಿವು ನಮ್ಮಲ್ಲಿ ಇರಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಅವರು ತಿಳಿಸಿದರು.

            ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮದ ಬಹುಮುಖಿ ಕಾರ್ಯಕ್ರಮಗಳ ಭಾಗವಾಗಿ ವಿವಿಧ ವಲಯಗಳಲ್ಲಿ ವೈವಿಧ್ಯಮಯ ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಕಾರ್ಯಕ್ರಮಗಳು ನಾಡಿನ ಉದ್ದಗಲ ಆಯೋಜನೆಗೊಳ್ಳುತ್ತಿದ್ದು ಇದರ ಅಂಗವಾಗಿ ಷಷ್ಠ್ಯಬ್ದ ಸಮಿತಿ ಮಂಜೇಶ್ವರ ವಲಯದ ನೇತೃತ್ವದಲ್ಲಿ ಭಾನುವಾರ ಅಪರಾಹ್ನ ಮಂಜೇಶ್ವರ ಹೊಸಬೆಟ್ಟು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಜಮ್ಮದಮನೆಯಲ್ಲಿ ಹಮ್ಮಿಕೊಂಡ ತುಳು ಭಾಷೆ, ಸಂಸ್ಕøತಿಯ ಜಾಗೃತಿಗಾಗಿ "ತುಳು ತುಲಿಪು-ಬದ್ಕ್ ಗೊಂಜಿ ಕೈತುಡರ್"  ಎಂಬ ವಿಶೇಷ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೊಳಿಸಿ ಚಾಲನೆ ನೀಡಿ ಅವರು ಮಾತನಾಡಿದರು.


        ನಮ್ಮೊಳಗಿನ ಅರಿವಿನ ವಿಸ್ತಾರತೆ ಬೆಳೆದಷ್ಟು ವ್ಯಕ್ತಿತ್ವ ಬೆಳೆಯುತ್ತದೆ. ವ್ಯಕ್ತಿತ್ವದ ಬೆಳವಣಿಗೆಯ ಬೆಳಕು ನಮ್ಮನ್ನಷ್ಟೇ ಅಲ್ಲದೆ ಜೊತೆಯಲ್ಲಿರುವವರಲ್ಲೂ ಪ್ರಚೋದನೆ ನೀಡುತ್ತದೆ. ಇದರಿಂದ ನೆಮ್ಮದಿ ನೆಲೆಗೊಳ್ಳುತ್ತದೆ ಎಂದು ಶ್ರೀಗಳು ತಿಳಿಸಿದರು. ಕೊರೊನಾ ಮಹಾಮಾರಿಗೆ ಪ್ರತಿಯೊಬ್ಬರೂ ಸ್ವ ಚಿಂತನೆಯ ಮೂಲಕ ಜಾಗರೂಕತೆ ಪಾಲಿಸುವ ಅಗತ್ಯವಿದ್ದು, ಪರರ ಒತ್ತಾಯದಿಂದ ವೈರಸ್ ವಿರುದ್ದ ಜಯಗಳಿಸಲು ಸಾಧ್ಯವಿಲಲ ಎಮದು ಅವರು ಕರೆನೀಡಿದರು.

          ಒಡಿಯೂರಿನ ಸಾದ್ವಿ ಮಾತಾನಂದಮಯೀ ಅವರು ಉಪಸ್ಥಿತರಿದ್ದು ಮಾತನಾಡಿ, ಆಧ್ಯಾತ್ಮ ಶಕ್ತಿಯಿಂದಷ್ಟೇ ಸವಾಲುಗಳಿಂದ ಪಾರಾಗಲು ಸಾಧ್ಯ. ಪ್ರತಿಯೊಬ್ಬರೂ ಸತ್ಪಥದ, ಸನ್ಮಂಗಳಕಾರಿ ಭಗವತ್ ಚಿಂತನೆಗೆ ಮಹತ್ವ ನೀಡಬೇಕು ಎಂದು ತಿಳಿಸಿದರು.


      ಷಷ್ಠ್ಯಬ್ದ ಕೇಂದ್ರ ಸಮಿತಿಯ ಮುಖ್ಯ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಬದುಕು ಮತ್ತು ಋಷಿ ಬದುಕು ಭಾರತದ ಪರಂಪರೆಯ ಮುಖ್ಯ ಅಂತಃಸತ್ವವಾಗಿದೆ. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮ ಸೀಮಿತ ಕಾಲಾವಧಿಯ ಚಟುವಟಿಕೆ ಅಲ್ಲ. ಅದು ಭವಿಷ್ಯದ ವಿಸ್ತಾರದ ಚಿಂತನೆಗಳೊಂದಿಗೆ ಇನ್ನಷ್ಟು ಬಲಪಡೆಯಲಿದೆ ಎಂದರು. ಅಂತರಂಗದ ಬೆಳಕು ಬೆಳಗಲು ಇಂತಹ ಕಾರ್ಯಕ್ರಮಗಳು ಕೈದೀವಿಗೆಯಾಗಿದೆ ಎಂದು ತಿಳಿಸಿದರು.  

            ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕಾದಂಬರಿ ಪ್ರಶಸ್ತಿ ವಿಜೇತೆ ರಾಜಶ್ರೀ ಟಿ.ರೈ ಪೆರ್ಲ ಹಾಗೂ ಗೀತಾ ಸಾಹಿತ್ಯ ಸಂಭ್ರಮ ಸಾಹಿತಿ ವಿಠಲ ನಾಯಕ್ ಕಲ್ಲಡ್ಕ ಅವರು ದುಶ್ಚಟಮುಕ್ತ ಸಮಾಜ-ಯುವ ಜನರ ಪಾತ್ರ ಎಂಬ ವಿಷಯದ ಬಗ್ಗೆ ವಿಶೇಷ  ಉಪನ್ಯಾಸ ನೀಡಿದರು.  ಹಿರಿಯ ಸಾಹಿತಿ, ಪತ್ರಕರ್ತ ಮಲಾರ್ ಜಯರಾಮ ರೈ ಅತಿಥಿಗಳಾಗಿ ಉಪಸ್ಥಿತರಿದ್ದರು. . ಷಷ್ಠ್ಯಬ್ದ ಸಮಿತಿ ಮಂಜೇಶ್ವರ ವಲಯದ ಗೌರವಾಧ್ಯಕ್ಷ ಡಾ.ಶ್ರೀಧರ ಭಟ್ ಉಪ್ಪಳ, ಅಧ್ಯಕ್ಷ ಶಶಿಧರ ಶೆಟ್ಟಿ ಜಮ್ಮದಮನೆ, ಕಾರ್ಯಾಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು, ಮುಖ್ಯ ಕಾರ್ಯದರ್ಶಿ ಅರವಿಂದಾಕ್ಷ ಭಂಡಾರಿ, ಮಂಜೇಶ್ವರ ಪಂಚಾಯತಿ ಸಮಿತಿ ಕಾರ್ಯದರ್ಶಿ ಹರಿಶ್ಚಂದ್ರ ಮಂಜೇಶ್ವರ, ಪ್ರಮುಖರಾದ ಪ್ರಭಾಕರ ರೈ ಕಲ್ಪಣೆ, ಜಯಪ್ರಕಾಶ್ ಶೆಟ್ಟಿ ಅಂಗಡಿದಾರು, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ರಾಜಾ ಬೆಳ್ಚಡ ಉದ್ಯಾವರ ಮಾಡ, ದಿನಕರ ಹೊಸಂಗಡಿ, ರಾಮಚಂದ್ರ ಸಿ.ಉಪ್ಪಳ, ವಿನೋದ್ ಪಾವಳ, ರೋಹಿತ್ ಭಂಡಾರಿ ಕುರಿಯ ಮೊದಲಾದವರು ಉಪಸ್ಥಿತರಿದ್ದರು.

     ಕಾರ್ಯಕ್ರಮದ ಮೊದಲಿಗೆ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಹರಿಕಥಾ ಸಂಕೀರ್ತನಾ ಸತ್ಸಂಗ ನಡೆಯಿತು. ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ವಂದಿಸಿದರು. ಜಯಪ್ರಕಾಶ್ ಶೆಟ್ಟಿ ಅಂಗಡಿದಾರು ನಿರೂಪಿಸಿದರು. 


             

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries