ಕಾಸರಗೋಡು: ಕೇರಳದಲ್ಲಿನೋಂದಣಿ ನಡೆಸಿ ಚಟುವಟಿಕೆ ನಡೆಸುತ್ತಿರುವ ಸಂಘಟನೆಗಳು, ಸಂಸ್ಥೆಗಳು ಅವುಗಳ ಚಟುವಟಿಕೆಗಳ ವ್ಯಾಪ್ತಿಯಲ್ಲಿರುವ ಮಕ್ಕಳ ಶೋಚನೀಯಾವಸ್ಥೆಯನ್ನು ತಿಳಿಸುವ ಚಿತ್ರಗಳು ಯಾ ಅವರ ವ್ಯಕ್ತಿತ್ವದ ಮಾಹಿತಿ ಬಳಸಿ ಸಾರ್ವಜನಿಕರಿಂದ ಧನಸಹಾಯ ಪಡೆಯಬಾರದು ಎಂದು ರಾಜ್ಯ ಮಕ್ಕಳ ಹಕ್ಕು ಸಂರಕ್ಷಣೆ ಆಯೋಗ ತಿಳಿಸಿದೆ. ಯಾವುದಾದರೂ ಮಗುವಿನ, ಕುಟುಂಬದ ಏಳಿಗೆಗಾಗಿ ಜಾಹೀರಾತು ಪ್ರಕಟ ಅನಿವಾರ್ಯವಾದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಪರಿಶೀಲನೆಗೆ ತಂದು, ಮಂಜೂರಾತಿ ಪಡೆದು, ಮಗುವಿನ ಹೆತ್ತವರ ಮತ್ತು ಸಾಧ್ಯವಾದರೆ ಆ ಮಗುವಿನ ಲಿಖಿತ ಒಪ್ಪಿಗೆ ಪಡೆದು ಮಾತ್ರ ಇಂಥಾ ಜಾಹೀರಾತು ಪ್ರಕಟಿಸಬಹುದಷ್ಟೇ. ಈ ಆದೇಶ ಉಲ್ಲಂಘಿಸುವ ವ್ಯಕ್ತಿಗಳ, ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಯೋಗ ಮುನ್ನೆಚ್ಚರಿಕೆ ನೀಡಿದೆ.