ಕಾಸರಗೋಡು: ಕಾಲ್ನಡಿಗೆ ಹಾದಿಯಲ್ಲಿ ತುಕ್ಕು ಹಿಡಿದ ಕಬ್ಬಿಣದ ಗ್ರಿಲ್ ಗಳು, ತುಂಡಾದ ಸ್ಲಾಬ್ ಗಳು.... ಈ ಬಗ್ಗೆ ದುರಸ್ತಿ ನಡೆಸದೇ ಇರುವ ಕಾಸರಗೋಡು ನಗರಸಭೆ ವಿರುದ್ಧ ಮಾನವ ಹಕ್ಕು ಆಯೋಗ ಧ್ವನಿ ಎತ್ತಿದೆ.
ಈ ಬಗ್ಗೆ ತನಿಖೆ ನಡೆಸಿ 4 ವಾರಗಳ ಅವಧಿಯಲ್ಲಿ ಅಗತ್ಯದ ಕ್ರಮ ಕೈಗೊಳ್ಳುವಂತೆ ಆಯೋಗ ಸದಸ್ಯ ಕೆ.ಬೈಜುನಾಥ್ ಅವರು ನಗರಸಭೆ ಕಾರ್ಯದರ್ಶಿ ಗೆ ಆದೇಶ ನೀಡಿದರು. ಈ ಕುರಿತು ಪತ್ರಿಕೆಗಳು ಪ್ರಕಟಿಸಿರುವ ವರದಿಗಳ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿರುವ ಆಯೋಗ ಈ ಆದೇಶ ನೀಡಿದೆ.
ಮಂಗಳವಾರ ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಈ ಕೇಸು ದಾಖಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿ ತಮ್ಮನ್ನು ಬಹಿರಂಗವಾಗಿ ಅಪಮಾನ ಮಾಡಿರುವ ಬಗ್ಗೆ ಕಾಸರಗೋಡು ಬ್ಲೋಕ್ ಪಂಚಾಯತ್ ಸದಸ್ಯರೊಬ್ಬರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇರವಾಗಿ ಹಾಜರಾಗುವಂತೆ ಆಯೋಗ ಆದೇಶಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಜರುಪಡಿಸಿರುವ ಉತ್ತರ ತೃಪ್ತಿಕರವಾಗಿಲ್ಲ ಎಂದು ಆಯೋಗ ತಿಳಿಸಿದೆ.
ತಾತ್ಕಾಲಿಕ ವಿಕಲಚೇತನ ಸರ್ಟಿಫಿಕೆಟ್ ಶಾಶ್ವತಗೊಳಿಸಿ ನೀಡಿಬೇಕು ಎಂದು ಫರ್ದೋಸ್ ನಗರ ನಿವಾಸಿ ಮುಹಮ್ಮದ್ ಕುಂuಟಿಜeಜಿiಟಿeಜ ಅವರು ಸಲ್ಲಿಸಿದ ದೂರಿನಲ್ಲಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಆಯೋಗ ಜಿಲ್ಲಾ ವೈದ್ಯಾಧಿಕಾರಿಗೆ ಆದೇಶ ನೀಡಿದೆ.
ತಮಗೆ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಯಿರುವ ಬಗ್ಗೆ ಬಂದಡ್ಕ ನಿವಾಸಿ ನಿರ್ಮಲಾ ಅವರು ಸಲ್ಲಿಸಿರುವ ದೂರಿನಲ್ಲಿ ತನಿಖೆ ನಡೆಸುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಆಯೋಗ ಆದೇಶ ನೀಡಿದೆ. ಒಟ್ಟು 53 ಕೇಸುಗಳನ್ನು ಆಯೋಗ ಪರಿಶೀಲಿಸಿದೆ.