ಕೊಚ್ಚಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯ ದರಗಳ ಕುರಿತು ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದೆ. ದುಬಾರಿ ಚಿಕಿತ್ಸಾ ದರವನ್ನು ನಿಯಂತ್ರಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ನೋಟಿಸ್ ನೀಡಲಾಗಿದೆ. ಎರ್ನಾಕುಳಂನ ವಕೀಲ ಪಿ ಜೋಸೆಫ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಚಿಕಿತ್ಸೆಯ ದರವನ್ನು ನಿಯಂತ್ರಿಸಲು ಸರ್ಕಾರವನ್ನು ಕೇಳಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಎರಡು ಪಟ್ಟು ಶುಲ್ಕ ವಿಧಿಸದಂತೆ ನಿರ್ದೇಶನ ನೀಡಿದ್ದರು. ಕೋವಿಡ್ ಸಂತ್ರಸ್ತರಿಗಾಗಿ ಶೇ 25 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಬೇಕೆಂದು ಅವರು ಒತ್ತಾಯಿಸಿದ್ದರು.
ಕ್ಯಾಸ್ಪ್ ವಿಮೆಯಡಿ ಚಿಕಿತ್ಸೆ ನೀಡಲು ಹೆಚ್ಚಿನ ಆಸ್ಪತ್ರೆಗಳು ಮುಂದೆ ಬರಬೇಕು ಎಂದು ಸಿಎಂ ಒತ್ತಾಯಿಸಿದ್ದರು. ಕ್ಯಾಸ್ಪ್ ದಲ್ಲಿ ಬಾಕಿ ಮೊತ್ತದ ಬಗ್ಗೆ ವ್ಯವಸ್ಥಾಪಕರು ಗಮನಸೆಳೆದಾಗ, ಬಾಕಿ ಹಣವನ್ನು 15 ದಿನಗಳಲ್ಲಿ ಇತ್ಯರ್ಥಪಡಿಸುವಂತೆ ಮುಖ್ಯಮಂತ್ರಿ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿರುವರು.