ಕಾಸರಗೋಡು: ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಗೆ ಕೋವಿಡ್ ಬಾಧಿಸಿರುವುದು ಖಚಿತಪಡಿಸಲಾಗಿದೆ. ಅವರು ತಿರುವನಂತಪುರಂನ ಮನೆಯಲ್ಲಿದ್ದಾರೆ. ಯಾವುದೇ ರೋಗಲಕ್ಷಣಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಕಾಸರಗೋಡು ಜಿಲ್ಲಾ ಕಣ್ಗಾವಲು ಅಧಿಕಾರಿ ಎ.ಟಿ.ಮನೋಜ್ ತಿ ಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಸಂಸದರಿಗೆ ಕೋವಿಡ್ ದೃಢಪಡಿಸಲಾಯಿತು. ಚಿಕಿತ್ಸಾ ಸೌಲಭ್ಯವನ್ನು ಸಿದ್ಧಪಡಿಸುವಂತೆ ತಿರುವನಂತಪುರ ಜಿಲ್ಲಾ ಕೋವಿಡ್ ನಿಯಂತ್ರಣ ಕೊಠಡಿಗೆ ತಿಳಿಸಲಾಗಿದೆ.