ಭೋಪಾಲ್ : ಮಧ್ಯಪ್ರದೇಶದ ಶಾಹಡೋಳ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಮಧ್ಯಮ ಪ್ರಮಾಣದ ಭೂಕಂಪ ಉಂಟಾಗಿದೆ. ಜನಜೀವನಕ್ಕೆ ಯಾವುದೇ ತೊಂದರೆಯಾಗಿರುವುದು ವರದಿಯಾಗಿಲ್ಲ.
ರಿಚ್ಚರ್ ಮಾಪಕದಲ್ಲಿ 3.9 ರ ಪ್ರಮಾಣ ಹೊಂದಿದ್ದ ಈ ಕಂಪನವು, ಮಧ್ಯಾಹ್ನ 12.53 ಕ್ಕೆ ಸಂಭವಿಸಿತು ಎಂದು ನ್ಯಾಷನಲ್ ಸೆಂಟರ್ ಫಾರ್ ಸೇಸ್ಮಾಲಜಿ ತಿಳಿಸಿದೆ.