ಕಾಸರಗೋಡು: ವಿಧಾನಸಭೆ ಚುನಾವಣೆಯ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ದ್ವೀಪ ನಿವಾಸಿಗಳು ಇತರರಿಗೆ ಮಾದರಿಯಾದರು. ಕಾಸರಗೋಡು ನಗರಸಭೆಯ 28ನೇ ವಾರ್ಡ್ ತಳಂಗರೆ ಕೊಪ್ಪಲ್ ಸ್ವೀಪದ 16 ಕುಟುಂಬಗಳ 100 ಮಂದಿ ಸದಸ್ಯರು ಈ ರೀತಿ ಮಾದರಿಯಾದವರು. ಇಲ್ಲಿನ ಸೇತುವಾ ದಾಟಿ ಇವರು ಪ್ರಧಾನ ವಾಹಿನಿ ಸೇರುತ್ತಾರೆ.
ಇವರಲ್ಲಿ ಬಹುಪಾಲು ಕೂಲಿಕಾರ್ಮಿಕರು. ಬೆಳಗ್ಗೆ ತಮ್ಮ ಕಾಯಕ್ಕೆ ತೆರಳುವ ಮುನ್ನವೇ ತಳಂಗರೆ ಮುಸ್ಲಿಂ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಪ್ರತಿ ಬಾರಿಯ ಚುನಾವಣೆಯಲ್ಲೂ ಈ ದ್ವೀಪ ನಿವಾಸಿಗಳು ತಪ್ಪದೇ ಮತದಾನ ನಡೆಸುತ್ತಾರೆ ಎಂದು ಸ್ಥಳೀಯ ನಿವಾಸಿ ಸರೋಜಾ ತಿಳಿಸಿದರು.