ಕಾಸರಗೋಡು: ಕೇರಳ ಸರ್ಕಾರದ ಟೆಕ್ನಿಕಲ್ ಎಜ್ಯುಕೇಶನ್ ಬೋರ್ಡ್‍ನಿಂದ ಅಂಗೀಕಾರ ಹೊಂದಿರುವ ಮೊಗ್ರಾಲ್‍ಪುತ್ತೂರಿನ ಬೆದ್ರಡ್ಕದಲ್ಲಿ ಚಟುವಟಿಕೆ ನಡೆಸುತ್ತಿರುವ ಸರ್ಕಾರಿ ಟೆಕ್ನಿಕಲ್ ಹೈಸ್ಕೂಲಿನಲ್ಲಿ ಎಂಟರಿಂದ ಹತ್ತನೇ ತರಗತಿ ವರೆಗಿನ ಉಚಿತ ತಾಂತ್ರಿಕ ಶಿಕ್ಷಣಕ್ಕಾಗಿ ಪ್ರವೇಶಾತಿ ಆರಂಭಗೊಂಡಿದೆ.
ಏಳನೇ ತರಗತಿ ಉತ್ತೀರ್ಣರಾದವರು ಸರ್ಕಾರಿ ತಾಂತ್ರಿಕ ಪ್ರೌಢಶಾಲೆಯ ಎಂಟನೇ ತರಗತಿಗೆ ಸೇರ್ಪಡೆಗೆ ಅವಕಾಶವಿದೆ.ಇಂಗ್ಲಿಷ್, ಕನ್ನಡ, ಮಲಯಾಳ ಇಲ್ಲಿನ ಕಲಿಕಾ ಭಾಷೆಯಾಗಿದ್ದು, ಹತ್ತನೇ ತರಗತಿ ವರೆಗೆ ಉಚಿತ ವಿದ್ಯಾಭ್ಯಾಸ ಪಡೆದುಕೊಳ್ಳಬಹುದಾಗಿದೆ. ಟಿಎಚ್‍ಎಸ್‍ಎಲ್‍ಸಿ ಕೋರ್ಸ್ ಎಸ್ಸೆಸೆಲ್ಸಿಗೆ ಸಮಾನವಾಗಿದ್ದು, ಇಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಘಳಿಗೆ ಪೊಲಿಟೆಕ್ನಿಕ್ ಕೋರ್ಸ್‍ಗೆ ವಿಶೇಷ ಮೀಸಲಾತಿ ಕಲ್ಪಿಸಲಾಗುತ್ತಿದೆ.ಪೊಲಿಟೆಕ್ನಿಕ್ ವ್ಯಾಸಂಗದ ನಂತರ ಮೂರು ವರ್ಷದ ಇಂಜಿನಿಯರಿಂಗ್ ಕೋರ್ಸ್ ನಡೆಸಿ, ಇಂಜಿನಿಯರಿಂಗ್ ಅರ್ಹತೆಯನ್ನೂ ಪಡೆಯಬಹುದಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರದ ವಿವಿಧ ಸ್ಕಾಲರ್‍ಶಿಪ್, ಉಚಿತ ಊಟದ ಸವಲತ್ತೂ ಲಭಿಸಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ(9400006496, 8592887942, 9809111318)ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.