ಕಾಸರಗೋಡು: ಶೈಕ್ಷಣಿಕ ಜಿಲ್ಲೆಯ 2020 ಡಿಸೆಂಬರ್ ತಿಂಗಳಲ್ಲಿ ನಡೆದ ಕೇರಳ ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್('ಕೆ.ಟೆಟ್')ಉತ್ತೀರ್ಣರಾದ ಪರೀಕ್ಷಾರ್ಥಿಗಳ ಪ್ರಮಾಣಪತ್ರಗಳ ಪರಿಶೋಧನೆ ಜಿಲ್ಲಾ ಶಿಕ್ಷಣ ಅಧಿಕಾರಿಗಳ ಕಚೇರಿಯಲ್ಲಿ ಏ. 22ರಿಂದ 26ರ ವರೆಗೆ ನಡೆಯಲಿದೆ.
22ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರ ವರೆಗೆ ಕ್ಯಾಟಗರಿ ನಂ 1, 1.30ರಿಂದ 4.30ರ ವರೆಗೆ ಕ್ಯಾಟಗರಿ ನಂಬರ್ 4ರ ಅಭ್ಯರ್ಥಿಗಳ ಪರಿಶೋಧನೆ ನಡೆಯಲಿದೆ. ಅದೇ ರೀತಿ 23, 24 ಹಾಗೂ 26ರಂದು ವಿವಿಧ ನೋಂದಾವಣಾ ಸಂಖ್ಯೆಯ ಅಭ್ಯರ್ಥಿಗಳ ಪರಿಶೋಧನೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಅಸಲಿ ಪ್ರಮಾಣಪತ್ರ, ಅಂಕಪಟ್ಟಿ, ಹಾಲ್‍ಟಿಕೆಟ್, ಜಾತಿ ಪ್ರಮಾಣಪತ್ರ ಹಾಗೂ ಅವುಗಳ ನಕಲು ಪ್ರತಿಗಳನ್ನು ಹಾಜರುಪಡಿಸಬೇಕು. ಕೋವಿಡ್ ಮಾನದಂಡ ಪಾಲಿಸಿಕೊಂಡು ಪರಿಶೋಧನಾ ಕಾರ್ಯ ನಡೆಯಲಿರುವುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಪ್ರಕಟಣೆ ತಿಳಿಸಿದೆ.