ಕಾಸರಗೋಡು: ಕೋವಿಡ್ ಎರಡನೇ ಹಂತದ ವ್ಯಾಪನ ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಆರಂಭಿಸಿದೆ. ಕೋವಿಡ್ ತಡೆಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶನಿವಾರದಿಂದ ಆ್ಯಂಟಿಜೆನ್ ತಪಾಸಣೆ ಆರಂಭೀಸಲಾಗಿದೆ. ಆ್ಯಂಟಿಜೆನ್ ತಪಾಸಣೆ ನಡೆಸಿದವರಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಇಲ್ಲಿಂದ ತಪಾಸಣಾ ವರದಿ ಪಡೆದುಕೊಂಡವರಿಗೆ ಕಾಸರಗೋಡು ನಗರಸಭಾಂಗಣದಲ್ಲಿ ಕೋವಿಡ್ ಲಸಿಕೆ ವಿತರಿಸಲಾಯಿತು.ಕೋವಿಡ್ ಪಾಸೆಟಿವ್ ಹೊಂದಿದವರು ಲಸಿಕೆ ಪಡೆಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ನಗರದಲ್ಲಿ ವಾಹನ ತಪಾಸಣೆಯನ್ನೂ ಬಿಗುಗೊಳಿಸಲಾಗಿದೆ. ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧೆಡೆ ಬ್ಯಾರಿಕೇಡ್ ನಿರ್ಮಿಸಿ ವಾಹನ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಚಾಲನೆ ನೀಡಿದೆ.