ಕಾಸರಗೋಡು : ಬಿ.ಎಲ್.ಒ.ಗಳು ಮತದಾತರಿಗೇ ಮತದಾತರ ಸ್ಲಿಪ್ ವಿತರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಮತದಾತರಿಗಲ್ಲದೆ ಇತರರಿಗೆ ಈ ಸ್ಲಿಪ್ ಹಸ್ತಾಂತರಿಸಕೂಡದು. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಪ್ರಜಾಪ್ರಭುತ್ವ ಕಾನೂನು ಪ್ರಕಾರ ಕ್ರಮ ಕೈಘೊಳ್ಳಲಾಗುವುದು ಎಂದವರು ತಿಳಿಸಿದರು. ಮತದಾತರ ಸ್ಲಿಪ್ ವಿತರಣೆ ತಕ್ಷಣ ನಡೆಸಬೇಕು. ಸ್ಲಿಪ್ ಇನ್ನೂ ಲಭಿಸದೇ ಇರುವ ಮತದಾತರು ಮತಗಟ್ಟೆ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹೇಳಿರುವರು.