ಮಂಜೇಶ್ವರ: ಮಲಬಾರ್ ದೇವಸ್ವ0 ಬೋರ್ಡಿನ ಆಧೀನಕ್ಕೊಳಪಟ್ಟ ಆನೆಕಲ್ಲು ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ನೂತನ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮವು ಶಿಲ್ಪಿಗಳಾದ ರಮೇಶ್ ಕಾರಂತ್ ಬೆದ್ರಡ್ಕ ರವರ ಮಾರ್ಗದರ್ಶನದಲ್ಲಿ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿಗಳ ದಿವ್ಯ ಹಸ್ತದಿಂದ ಸೋಮವಾರ ಬೆಳಗ್ಗೆ ನಡೆಯಿತು.
ಈ ಸಂದರ್ಭ ಕ್ಷೇತ್ರದ ಪವಿತ್ರಪಾಣಿ ಮಹಾಲಿಂಗೇಶ್ವರ ಭಟ್ ಪಾರೆಕುಂಡಡ್ಕ, ಗ್ರಾಮ ಪವಿತ್ರಪಾಣಿ ಕುಶಲ ಕುಮಾರ್ ಪಾತೂರಾಯ, ಮಲ್ಲಿಕಾ ಆರ್. ಚೌಟ ಕೊಣಿಬೈಲ್, ಕ್ಷೇತ್ರದ ಮೆನೇಜಿಂಗ್ ಟ್ರಸ್ಟಿಗಳಾದ ಕೃಷ್ಣ ನಾಯ್ಕ್, ವೆಂಕಟರಾಜ್ ರೈ, ಕಾರ್ತೀಶ ಎನ್, ಚಂದ್ರಶೇಖರ ರೈ, ಲೋಕಯ್ಯ ನಾಯ್ಕ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನಡಿಮಾರ್, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಭಟ್ ಪಜ್ವ, ಉಪಾಧ್ಯಕ್ಷ ಎನ್.ಟಿ ರೈ, ಕ್ಷೇತ್ರದ ಗೌರವ ಸಲಹೆಗಾರರಾದ ವಿದ್ಯಾನಂದ ಸಾಮಾನಿ, ಕೇರಳ ಮಲಾಬಾರ್ ದೇವಸ್ವ0 ಬೋರ್ಡ್ ನ ಮಂಜೇಶ್ವರ ಏರಿಯಾ ಸಮಿತಿ ಸದಸ್ಯೆ ಶ್ರೀಮತಿ ಗೀತಾ ವಿ.ಸಾಮಾನಿ, ಪಿ.ಡಬ್ಲ್ಯೂ.ಡಿ ಇಂಜಿನಿಯರ್ ಶ್ರೀನಿಧಿ ಆನೆಕಲ್ಲು, ಕ್ಷೇತ್ರದ ಪ್ರಧಾನ ಅರ್ಚಕರಾದ ವಿಷ್ಣು ಪ್ರಸಾದ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಪಧಾಧಿಕಾರಿಗಳು ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡರು.