ಕೋಝಿಕೋಡ್: ಸೋಲಾರ್ ವಂಚನೆ ಪ್ರಕರಣದಲ್ಲಿ ಸರಿತಾ ಎಸ್ ನಾಯರ್ ತಪ್ಪಿತಸ್ಥೆ ಎಮದು ನ್ಯಾಯಾಲಯ ಮಂಗಳವಾರ ಘೋಷಿಸಿದೆ. ಕೋಝಿಕೋಡ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸರಿತಾ ನಾಯರ್ ತಪ್ಪಿತಸ್ಥೆ ಎಂದು ಘೋಷಿಸಿದ್ದು ಇಂದು ಮಧ್ಯಾಹ್ನ 3 ಗಂಟೆಗೆ ಶಿಕ್ಷೆಯನ್ನು ಸೂಚಿಸಲಿದೆ.
ಕೋಝಿಕೋಡ್‍ನ ಖಾಸಗಿ ಉದ್ಯಮಿ ಅಬ್ದುಲ್ ಮಜೀದ್ ಅವರಿಂದ ಹಣ ವಸೂಲಿಗೈದು ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ. ಸರಿತಾ ಮತ್ತು ಆಕೆಯ ಸಹ ಆರೋಪಿ ಬಿಜು ರಾಧಾಕೃಷ್ಣನ್ 42,70,000 ರೂ.ಗಳ ವಂಚನೆ ನಡೆಸಿದ್ದರು. ಈ ಪ್ರಕರಣದ ಮೊದಲ ಆರೋಪಿ ಬಿಜು ರಾಧಾಕೃಷ್ಣನ್ ಆಗಿದ್ದಾರೆ. ಏತನ್ಮಧ್ಯೆ, ಈ ಪ್ರಕರಣದ ಮೂರನೇ ಆರೋಪಿ ಮಣಿ ಮೋನ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳಿದ್ದರು.
ಇದು 2013 ರಲ್ಲಿ ದಾಖಲಾದ ಪ್ರಕರಣಗಳಲ್ಲಿ ಇದು ಒಂದಾಗಿದೆ. ಸರಿತಾ ವಿರುದ್ಧ ವಂಚನೆ, ಸೋಗು ಹಾಕುವಿಕೆ, ಖೋಟಾ ದಾಖಲೆಗಳ ನಿರ್ಮಾಣ ಮೊದಲಾದ ಆರೋಪಗಳನ್ನು ಸರಿತಾ ನಾಯರ್ ವಿರುದ್ದ ಹೊರಿಸಲಾಗಿದೆ.