ಕಾಸರಗೋಡು : ವಿಧಾನಸಭೆ ಕ್ಷೇತ್ರಗಳ ಚುನಾವಣೆ ಕಾಸರಗೋಡು ಜಿಲ್ಲೆಯಲ್ಲಿ ಹಸುರು ಸಂಹಿತೆಯನ್ನು ಪಾಲಿಸುವ ಮೂಲಕ ನಡೆದಿದೆ.
ಆಹಾರ ತ್ಯಾಜ್ಯ ಸಹಿತ ಜೈವಿಕ ತ್ಯಾಜ್ಯಗಳನ್ನು ಗ್ರಾಮ ಪಂಚಾಯತ್, ನಗರಸಭೆಗಳ ಮೇಲ್ನೋಟದಲ್ಲಿ ಮತದಾದಂದೇ ತೆರವುಗೊಳಿಸುವ ಕಾಯಕ ನಡೆಸಲಾಗಿದೆ. ವೈದ್ಯಕೀಯ ತ್ಯಾಜ್ಯಗಳ ಸಂಸ್ಕರಣೆಗೆ ಆರೋಗ್ಯ ಇಲಾಖೆ ಮೇಲ್ನೋಟ ವಹಿಸಿತ್ತು.
ಉದುಮಾ ವಿಧಾನಸಭೆ ಕ್ಷೇತ್ರದ ಪೆರಿಯ ಹೈಯರ್ ಸೆಕೆಂಡರಿ ಸಾಲೆಯಲ್ಲಿ ಎನ್.ಎಸ್.ಎಸ್. ಸ್ವಯಂ ಸೇವಕರ ನೇತೃತ್ವದಲ್ಲಿ ನಿರ್ಮಿಸಿದ್ದ ಹಸುರು ಮತಗಟ್ಟೆ ಗಮನ ಸೆಳೆದಿದೆ. ತೆಂಗಿನಗರಿ ಸಹಿತ ಪ್ರಕೃತಿಸ್ನೇಹಿ ಸಾಮಾಗ್ರಿಗಳನ್ನು ಬಳಸಿ ಈ ಮತಗಟ್ಟೆ ನಿರ್ಮಿಸಲಾಗಿತ್ತು.
ಹರಿತ ಕ್ರಿಯಾ ಸೇನೆ ಶುಚಿತ್ವದ ನೇತೃತ್ವ ವಹಿಸಿತ್ತು. ಕುಟುಂಬಶ್ರೀ ಆಹಾರ ಪೂರೈಕೆ ನಡೆಸುವ ವೇಳೆ ಶುಚಿತ್ವ ಬಗ್ಗೆ ಎಚ್ಚರಿಕೆ ವಹಿಸಲಾಗಿತ್ತು.