ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಂಗಣದ ಒಳಭಾಗಕ್ಕೆ ಮಾಡುಮಾಡುವ ಬಗ್ಗೆ ಸಂಕಲ್ಪಿಸಲು ಶ್ರೀ ಕ್ಷೇತ್ರದಲ್ಲಿ ಏ. 17 ರಂದು ಗಣಹೋಮ, ಅನುಜ್ಞಾ ಕಲಶ , ಮಹಾ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ ಜರಗಿತು. ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಅರವತ್ ದಾಮೋದರನ್ ಅವರ ಮಾರ್ಗದರ್ಶನದಲ್ಲಿ ಶ್ರೀ ಪದ್ಮನಾಭತಂತ್ರಿ ಅವರು ಕಾರ್ಯಕ್ರಮ ನಡೆಸಿದರು.
ಕ್ಷೇತ್ರ ಆಡಳಿತ ಮೊಕ್ತೇಸರ ಸುಬ್ರಾಯ ಬಳ್ಳುಳ್ಳಾಯ ಅವರ ನೇತೃತ್ವದಲ್ಲಿ ಸೀತಾರಾಮ ಬಳ್ಳುಳ್ಳಾಯ ಕಾರ್ಯಕ್ರಮ ಸಂಯೋಜನೆ ಮಾಡಿದರು. ಕೋವಿಡ್ ಮಾನದಂಡಗಳನ್ನು ಅನುಸರಿಸಿ ಕಾರ್ಯಕ್ರಮ ಜರಗಿತು.
ಕ್ಷೇತ್ರಾಂಗಣದ ಒಳಭಾಗಕ್ಕೆ ಶಾಶ್ವತ ಚಪ್ಪರ ವ್ಯವಸ್ಥೆಯನ್ನು ಸೇವಾ ರೂಪದಲ್ಲಿ ಕೊಡವಂಜಿ ಕೃಷ್ಣ ಬಳ್ಳುಳ್ಳಾಯರ ಪುತ್ರ ವಿಷ್ಣು ಬಳ್ಳುಳ್ಳಾಯ ಇವರು ಸಮರ್ಪಣೆ ಮಾಡಿರುವರು.