ಕಾಸರಗೋಡು: ಅಸಂಘಟಿತ ವಲಯದ ಕೃಷಿಕೇತರ ಉದ್ದಿಮೆಗಳ ಕುರಿತು ನ್ಯಾಷನಲ್ ಸ್ಟಾಟಿಕಲ್ ಆಫೀಸ್ ಅಖಿಲ ಭಾರತೀಯ ಮಟ್ಟದಲ್ಲಿ ರಾಷ್ಟ್ರೀಯ ಸ್ಯಾಂಪಲ್ ಸರ್ವೇ ನಡೆಸಲಿದೆ. ಸರ್ವೇಯ ಗೃಹ ಉದ್ದಿಮೆಗಳಿಂದ ಮತ್ತು ವಾಣಿಜ್ಯ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಲಾಗುವುದು.
ಅಸಂಘಟಿತ ವಲಯದ ಬಗ್ಗೆ ವಾರ್ಷಿಕ ಸರ್ವೆಯ ದ್ವಿತೀಯ ಹಂತದ ಸರ್ಕಾರದ ವಿವಿಧ ನೀತಿ ರಚನೆ ಮತ್ತು ಯೋಜನೆ ನಿರ್ವಹಣೆಗೆ ಸರ್ವೇಯಲ್ಲಿ ಲಭಿಸುವ ಮಾಹಿತಿ ಬಳಕೆಯಾಗಲಿದೆ. ಸರ್ವೇ 2022 ಮಾರ್ಚ್ ತಿಂಗಳ ವರೆಗೆ ಮುಂದುವರಿಯಲಿದೆ. ಸರ್ವೇ ಎನ್ಯುಮರೇಟರ್ ಗಳಿಗೆ ಇರುವ ತರಬೇತಿ ಮುಂದಿನ ವಾರ ಆರಂಭಗೊಳ್ಳಲಿದೆ. ಉದ್ದಿಮೆಗಳ ಕುರಿತು ವ್ಯಕ್ತಿಗತ ಮಾಹಿತಿ ಗುಪ್ತವಾಗಿರಿಸಲಾಗುವುದು. ಸರ್ವೇಗಾಗಿ ಆಗಮಿಸುವ ಎನ್ಯುಮರೇಟರ್ ಗಳಿಗೆ ಸೂಕ್ತ ಮಾಹಿತಿ ನೀಡುವಂತೆ ಕೋಯಿಕೋಡ್ ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ ಡೈರೆಕ್ಟರ್ ಮುಹಮ್ಮದ್ ಯಾಸಿರ್ ಎಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.