ನವದೆಹಲಿ: ಮಾಜಿ ಅಟಾರ್ನಿ ಜನರಲ್ (ಎಜಿ) ಮತ್ತು ಹಿರಿಯ ವಕೀಲ ಸೋಲಿ ಸೊರಾಬ್ಜಿ ಶುಕ್ರವಾರ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಸೊರಾಬ್ಜಿ ಹೋರಾಟ ನಡೆಸಿದ್ದು ಇವರ ಸೇವೆಯನ್ನು ಗುರುತಿಸಿ 2002 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಒಲಿದು ಬಂದಿತ್ತು.
ಕೊರೋನಾ ಸೋಂಕಿಗೆ ಒಳಗಾಗಿದ್ದ ಸೋಲಿ ಸೊರಾಬ್ಜಿ ಇಂದು ಬೆಳಿಗ್ಗೆ ನಿಧನರಾದರು. ಸೋಲಿ ಸರ್ ಅಸಂಖ್ಯಾತ ಅಭಿಮಾನಿಗಳನ್ನು ಮತ್ತು ಅನೇಕ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಒದಗಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
1930 ರಲ್ಲಿ ಜನಿಸಿದ ಸೊರಾಬ್ಜಿ 1953 ರಲ್ಲಿ ಬಾರ್ ಕೌನ್ಸಿಲ್ ಗೆ ಸೇರಿದ್ದರು.1971 ರಲ್ಲಿ ಬಾಂಬೆ ಹೈಕೋರ್ಟ್ ಹಿರಿಯ ವಕೀಲರಾಗಿ ನೇಮಕವಾಗಿದ್ದರು.