ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಕಳವಳ ವ್ಯಕ್ತಪಡಿಸಿದರು. ಕ್ಷೇತ್ರದ ಕಾರ್ಯಕರ್ತರಿಂದ ಪಡೆದ ಮಾಹಿತಿಯು ಆತಂಕಕಾರಿ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ಕ್ಷೇತ್ರದಲ್ಲಿ ವಿಜಯದ ಬಗ್ಗೆ ಬಿಜೆಪಿ ಪದೇ ಪದೇ ಭರವಸೆ ನೀಡುತ್ತಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿದ್ದಾರೆ.
ಗೆಲುವಿನ ಬಗ್ಗೆ ಮಾತನಾಡಿದ ಸುರೇಂದ್ರನ್:
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸ್ಪರ್ಧಿ ಕೆ.ಸುರೇಂದ್ರನ್ ಅವರು ಮಂಜೇಶ್ವರದಲ್ಲಿ ಬಿಜೆಪಿ ಉತ್ತಮ ಅಂತರದಿಂದ ಗೆಲುವು ಖಚಿತ ಎಂದು ಸ್ಪಷ್ಟಪಡಿಸಿರುವರು. ಮಹಿಳೆಯರು ಮತ್ತು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನಗೈದಿರುವುದು ಬಿಜೆಪಿ ಪಾಳೆಯದಲ್ಲಿ ಗೆಲುವಿನ ಖಚಿತತೆಗೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ 89 ಮತಗಳ ಅಂತರದಲ್ಲಿ ಕೆ.ಸುರೇಂದ್ರನ್ ಪರಾಭವಗೊಂಡಿದ್ದರು. ಇಂತಹ ಅತಿ ಕಡಿಮೆ ಮತದ ಅಂತರದ ಸೋಲಿನ ಪ್ರತೀಕಾರ ಮಂಗಳವಾರ ನಡೆದ ಚುನಾವಣೆಯಲ್ಲಿ ಬಹುತೇಕ ಮತಗಟ್ಟೆಗಲಲ್ಲಿ ಕಂಡುಬಂತು. ಮಂಗಳೂರಿನ ಬೆಳವಣಿಗೆ ಮತ್ತು ಮೋದಿ ಸರ್ಕಾರಕ್ಕೆ ಬೆಂಬಲ ಮತದಾರರ ಮೇಲೆ ಪ್ರಭಾವ ಬೀರಿದೆ. ಈ ಬಾರಿ ರಾಜ್ಯದಲ್ಲಿ ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗಲಾರದೆಂದು ತರ್ಕಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎನ್‍ಡಿಎ ಕೇರಳದ ಹಿಂದಿನ ಪ್ರೇರಕ ಶಕ್ತಿಯಾಗಲಿದೆ. 30-35 ಕ್ಷೇತ್ರಗಳಲ್ಲಿ ಎನ್‍ಡಿಎ ತೀವ್ರ ಹೋರಾಟ ನಡೆಸಿದ್ದು ಬಹುಮತ ಲಭ್ಯವಾಗದೆಂದು ಸುರೇಂದ್ರನ್ ತಿಳಿಸಿರುವರು.
ಮಂಜೇಶ್ವರದಲ್ಲಿ ಸೋಲನ್ನು ಯುಡಿಎಫ್ ಒಪ್ಪಿಕೊಂಡಿತೇ?
ಮುಲ್ಲಪ್ಪಳ್ಳಿ ಅವರ ಹೇಳಿಕೆಯ ಬಿಡುಗಡೆಯೊಂದಿಗೆ, ರಾಜ್ಯದ ನಿರ್ಣಾಯಕ ಕ್ಷೇತ್ರವಾದ ಮಂಜೇಶ್ವರದಲ್ಲಿ ಯುಡಿಎಫ್ ಸೋಲನ್ನು ಒಪ್ಪಿಕೊಂಡಿದೆ ಎಂಬ ಪ್ರಚಾರ ತೀವ್ರಗೊಂಡಿತು. ಎರಡು ದಿನಗಳ ಹಿಂದೆ, ಮಲ್ಲೇಶ್ವರದಲ್ಲಿ ಸೋಲಿನ ಪೂರ್ವ ಮಾಹಿತಿ ತಿಳಿದವರಂತೆ ಎಲ್‍ಡಿಎಫ್ ಯುಡಿಎಫ್‍ಗೆ ಮತ ಚಲಾಯಿಸಬೇಕು ಎಂದು ಬಹಿರಂಗವಾಗಿ ಮುಲ್ಲಪ್ಪಳ್ಳಿ ಸ್ಪಷ್ಟಪಡಿಸಿದ್ದರು. ಬಳಿಕ ಅವರು ಮಂಜೇಶ್ವರ ಕ್ಷೇತ್ರದ ಮತದಾನೋತ್ತರ ವರದಿಗಳು ಯುಡಿಎಫ್ ಗೆ ಹಿತಕರವಲ್ಲ ಎಂದು ಒಪ್ಪಿಕೊಂಡರು. ಏತನ್ಮಧ್ಯೆ, ಬಿಜೆಪಿ ಕ್ಷೇತ್ರದ ಬಗ್ಗೆ ವಿಶ್ವಾಸ ಹೊಂದಿದೆ. ಎಡಪಂಥೀಯರ ಮತಗಳನ್ನು ಕೇಳಿದ ಮುಲ್ಲಪ್ಪಳ್ಳಿಯ ಹೇಳಿಕೆ ಬಿಡುಗಡೆಯಾದ ನಂತರ ಯುಡಿಎಫ್ ಮುಂಜಾಗ್ರತಾ ಜಾಮೀನು ತೆಗೆದುಕೊಳ್ಳುತ್ತಿದೆ ಎಂದು ಕೆ ಸುರೇಂದ್ರನ್ ಸ್ಪಷ್ಟಪಡಿಸಿದ್ದರು.
10 ಸ್ಥಾನಗಳಲ್ಲಿ ಬಿಜೆಪಿ-ಸಿಪಿಎಂ ಮೈತ್ರಿ!?:
ಬಿಜೆಪಿ ಮತ್ತು ಸಿಪಿಎಂ ರಾಜ್ಯದ ಹಲವೆಡೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ಮುಲ್ಲಪ್ಪಳ್ಳಿ ಆರೋಪಿಸಿರುವರು. ಮಂಜೇಶ್ವರದÀಲ್ಲಿ ನಡೆದ ಮೈತ್ರಿಯ ನಾಯಕ ಸಿಎಂ ಎಂದು ಮುಲ್ಲಪ್ಪಳ್ಳಿ ಆರೋಪಿಸಿದರು. ಇಂತಹ ರಾಜಕೀಯ ಪಾಪವನ್ನು ಮುಖ್ಯಮಂತ್ರಿ ತೊಳೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‍ನ ಮತಗಳು ರಾಜ್ಯದ ಕೆಲವೆಡೆ ಎಲ್.ಡಿ.ಎಫ್ ಗೆ ದಾಖಲಾಗಿವೆ ಎಂಬ ವಿಶ್ವಾಸ ನಮಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷರನ್ನು ವಿಧಾನಸಭೆಗೆ ಕರೆತರಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನಡುವೆ ಮಾಡಿಕೊಂಡ ಒಪ್ಪಂದದ ಹಿನ್ನೆಲೆಯನ್ನು ಅರ್ಥಮಾಡಿಕೊಂಡಾಗ ಇದು ಸ್ಪಷ್ಟಗೊಳ್ಳುತ್ತದೆ. ಕನಿಷ್ಠ ಹತ್ತು ಸ್ಥಾನಗಳಲ್ಲಿ ಅಪವಿತ್ರ ಮೈತ್ರಿ ಇದೆ ಎಂದು ಮುಲ್ಲಪ್ಪಳ್ಳಿ ರಾಮಚಂದ್ರನ್ ಆರೋಪಿಸಿದರು.