ತ್ರಿಶೂರ್: ತ್ರಿಶೂರ್ ಅವಿನಿಸೇರಿ ಪಂಚಾಯತ್ ಆಡಳಿತವು ಬಿಜೆಪಿ ತೆಕ್ಕೆಗೆ ಲಭ್ಯವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ವಿಜೇತರಾಗಿದ್ದ ಹರಿ ಅವರನ್ನು ಪಂಚಾಯತ್ ಅಧ್ಯಕ್ಷರನ್ನಾಗಿ ಕೇರಳ ಹೈಕೋರ್ಟ್ ಘೋಷಿಸಿದೆ. ಬಿಜೆಪಿ ಪಂಚಾಯಿತಿಯಲ್ಲಿ ಅತಿದೊಡ್ಡ ಏಕೈಕ ಪಕ್ಷವಾಗಿದೆ.
ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಯ ಬಳಿಕ, ಅವಿನಿಸ್ಸೆರಿ ಪಂಚಾಯತ್‍ನಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿತ್ತು. ಬಿಜೆಪಿಗೆ ಆರು ಸ್ಥಾನಗಳು, ಎಲ್‍ಡಿಎಫ್ ಐದು ಮತ್ತು ಕಾಂಗ್ರೆಸ್ ಮೂರು ಸ್ಥಾನಗಳು ದೊರೆತಿದ್ದವು.
ಅಧ್ಯಕ್ಷೀಯ ಚುನಾವಣೆಯಲ್ಲಿ ಯುಡಿಎಫ್ ಎಲ್ಡಿಎಫ್ ನ್ನು ಬೆಂಬಲಿಸಿತ್ತು. ಕಾಂಗ್ರೆಸ್ ನ ಮೂವರೂ ಸದಸ್ಯರು ಎಲ್ಡಿಎಫ್ ಪರ ಮತ ಚಲಾಯಿಸಿದ್ದರು. ಆದರೆ ಮತ ಗೆದ್ದ ಎಡ ಅಭ್ಯರ್ಥಿ ವಿಜೇತರಾದ ಕೂಡಲೇ ರಾಜೀನಾಮೆ ನೀಡಿದರು. ಆ ಬಳಿಕ ಹರಿ ಹೈಕೋರ್ಟ್‍ನನ್ನು ಸಂಪರ್ಕಿಸಿದ್ದರು.