ಮಂಜೇಶ್ವರ: ಮಂಜೇಶ್ವರ ಉದ್ಯಾವರ ಸಾವಿರ ಜಮಾಅತಿನ ಅಂಗಣದಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ ಅಸ್ಸಯ್ಯದ್ ಶಹೀದ್ವಲಿಯುಲ್ಲಾಹಿ ರವರ ಹೆಸರಲ್ಲಿ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ದರ್ಗಾ ಸಮಿತಿ ಅಧ್ಯಕ್ಷ ಎ.ಕೆ. ಮೊಹಮ್ಮದ್ ಮೋನು ಹಾಜಿಯವರು ಗುರುವಾರ ಧ್ವಜಾರೋಹಣ ಗೈಯುವುದರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಪಳ್ಳಿಕುಂಞÂ ಹಾಜಿ, ಕೋಶಾಧಿಕಾರಿ ಆಲಿಕುಟ್ಟಿ, ಜೊತೆ ಕಾರ್ಯದರ್ಶಿ ಎಸ್ ಎಂ ಬಶೀರ್, ಉದ್ಯಾವರ ಜಮಾಅತ್ ಅಧ್ಯಕ್ಷ ಸೂಫಿ ಹಾಜಿ, ಪದಾಧಿಕಾರಿಗಳಾದ ಪೂಕುಂಞÂ ತಂಙಲ್, ನಿಝಾರ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ರಾತ್ರಿ 8.30ಕ್ಕೆ ಅತ್ತಾವುಳ್ಳ ತಂಙಳ್ ರವರ ಮಖಾಮ್ ಝಿಯಾರತಿನ ಬಳಿಕ ಜಮಾಅತ್ ಮುದರಿಸ್ ಅಬ್ದುಲ್ ಖಾದರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಹಾಗೂ ಸಾವಿರ ಜಮಾಅತ್ ಖಾಝಿ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಿದರು.
ಅಬ್ದುಲ್ ಕರೀಂ ಫೈಝಿ ಕುಂತೂರು ಮುಖ್ಯ ಭಾಷಣ ನಡೆಸಿದರು. ಈ ಸಂದರ್ಭ ಹಮೀದ್ ತಂಙಳ್, ಸಯ್ಯದ್ ಮೌಲನಾ ತಂಙಳ್, ಸೂಫಿ ಹಾಜಿ, ಪಳ್ಳಿಕುಂಞÂ ಹಾಜಿ, ಮೊಯಿದೀನ್ ಕುಂಞÂ ಹಾಜಿ ಸಹಿತ ಹಲವರು ಉಪಸ್ಥಿತರಿದ್ದರು.
ಶುಕ್ರವಾರ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಉಸ್ತಾದರ ನೇತೃತ್ವದಲ್ಲಿ ಲಕ್ಷಾಂತರ ವಿಶ್ವಾಸಿಗಳು ಭಾಗವಹಿಸಿದ ಮದನೀಯಂ ಮಜ್ಲಿಸ್ ನಡೆಯಿತು. ಇಂದು ನಡೆಯಲಿರುವ ಸಮಾರೋಪದಲ್ಲಿ ಉದ್ಯಾವರ ಖತೀಬ್ ಅಬ್ದುಲ್ ಕರೀಂ ಧರ್ಮಿಯವರ ಅಧ್ಯಕ್ಷತೆ ವಹಿಸುವರು. ಸಮಾರಂಭವನ್ನು ಅಸ್ಸಯ್ಯದ್ ಇಬ್ರಾಹಿಂ ಖಲೀಲುಲ್ಬುಖಾರಿ ಕಡಲುಂಡಿ ತಂಙಳ್ ಉದ್ಘಾಟಿಸಲಿರುವರು. ಬಳಿಕ ಮೌಲೂದ್ ಮಜಲಿಸ್ ಮತ್ತು ಹಗಲು ಉರೂಸ್ ಹಾಗೂ ಅನ್ನದಾನನಡೆಯಲಿದೆ.