ನವದೆಹಲಿ: ಮೆಸೇಜ್ ಆಪ್ ಗಳ ಹೊಸ ಗೌಪ್ಯತೆ ನೀತಿಯನ್ನು ತನಿಖೆ ನಡೆಸಬೇಕೆಂಬ ಭಾರತೀಯ ಸ್ಪರ್ಧಾ ಆಯೋಗ(ಸಿಸಿಐ)ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನ್ಯಾಯಾಧೀಶೆ ನಿರಾಕರಿಸಿದ್ದಾರೆ.
ವಾಟ್ಸಾಪ್ ಮತ್ತು ಫೇಸ್ ಬುಕ್ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಲು ಹಿಂದೇಟು ಹಾಕಿದ ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್, ಹೈಕೋರ್ಟ್ ನ ರಿಜಿಸ್ಟ್ರರ್ ಗೆ ಆದೇಶ ನೀಡಿ ಏಪ್ರಿಲ್ 12ಕ್ಕೆ ಮತ್ತೊಂದು ನ್ಯಾಯಪೀಠಕ್ಕೆ ವರ್ಗಾಯಿಸುವಂತೆ ಸೂಚಿಸಿದ್ದಾರೆ.
ಸಿಸಿಐ ಕಳೆದ ಮಾರ್ಚ್ 24ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಫೇಸ್ ಬುಕ್ ಮತ್ತು ವಾಟ್ಸಾಪ್ ಹೊಸ ಗೌಪ್ಯತೆ ನೀತಿಯ ಬಗ್ಗೆ ತನಿಖೆ ನಡೆಸಬೇಕೆಂದು ಮತ್ತು ತನಿಖೆ 60 ದಿನಗಳೊಳಗೆ ಮುಗಿಸಬೇಕೆಂದು ಸಹ ಕೋರಿದ್ದವು.
ಫೇಸ್‌ಬುಕ್ ಮತ್ತು ವಾಟ್ಸಾಪ್ ಎರಡೂ, ವಕೀಲ ತೇಜಸ್ ಕರಿಯಾ ಅವರ ಮೂಲಕ ಸಲ್ಲಿಸಿದ ಪ್ರತ್ಯೇಕ ಮನವಿಯಲ್ಲಿ, ವಾಟ್ಸಾಪ್‌ನ ಗೌಪ್ಯತೆ ನೀತಿಯ ವಿಷಯವು ಸುಪ್ರೀಂ ಕೋರ್ಟ್‌ನ ಮುಂದೆ ಇರುವುದರಿಂದ, ಸಿಸಿಐ ತನಿಖೆಗೆ ಆದೇಶಿಸುವ ಅಗತ್ಯವಿಲ್ಲ ಎಂದು ವಾದಿಸಿದೆ.
ಕಳೆದ ಜನವರಿಯಲ್ಲಿ, ಬಂದ ಸುದ್ದಿ ವರದಿಗಳ ಆಧಾರದ ಮೇಲೆ ಸಿಸಿಐ ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಯ ಬಗ್ಗೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.