ಬದಿಯಡ್ಕ: ಪೆÇಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ವಾರ್ಷಿಕ ಮಹಾ ಸಭೆಯು ಶ್ರೀ ಚೀರುಂಬಾ ಭಗವತಿ ಸಭಾ ಭವನದಲ್ಲಿ ಭಾನುವಾರ ಜರಗಿತು. ಆಡಳಿತ ಸಮಿತಿ ಅಧ್ಯಕ್ಷ ರಾಘವನ್ ಕನಕತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆಚಾರ ಸ್ಥಾನಿಕ ಅಂಬಾಡಿ ಕಾರ್ನವರ್, ಹಿರಿಯರಾದ ಚಿರಿಯಂಡ ಬಡಕಾಜೆ, ಪ್ರವಾಸಿ ಸಮಿತಿ ಅಧ್ಯಕ್ಷ ಶಶಿಧರ ಚೇಡಿಕಾನ, ಯುವಜನ ಸಂಘ ಅಧ್ಯಕ್ಷ ಜನಾರ್ಧನ ಪೆÇಡಿಪ್ಪಳ್ಳ, ಮಹಿಳಾ ಸಮಿತಿ ಕಾರ್ಯದರ್ಶಿ ಸರಿತ ಶಶಿಧರ ಮೊದಲಾದವರು ಮಾತನಾಡಿದರು. ಕಾರ್ಯದರ್ಶಿ ಪುರುಷೋತ್ತಮ ಕೋಳಾರಿ ವರದಿ ವಾಚಿಸಿದರು. ಡಾ.ಶ್ರೀಧರ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸುಧಾಕರ ಚೇಂಬೋಡು, ಉಪಾಧ್ಯಕ್ಷ ಸುನಿಲ್ ಪುಂಡೂರು, ಆಚಾರ ಸ್ಥಾನಿಕರು, ವಿವಿಧ ಸಮಿತಿ ಪದಾಧಿಕಾರಿಗಳು, ಸಮುದಾಯ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭ ನೂತನ ಸಮಿತಿ ರಚಿಸಲಾಯಿತು. ನೂತನ ಪದಾಧಿಕಾರಿಗಳಾಗಿ ವಸಂತ ಚೇಂಬೋಡು( ಅಧ್ಯಕ್ಷ) , ಅಶೋಕ ಭಂಡಾರ ವೀಡು, ಶಶಿಧರ ಚೇಡಿಕಾನ, ರಾಮ ಚೊಟ್ಟತ್ತಡ್ಕ, ಬಾಲಕೃಷ್ಣ ಕೋಳಾರಿ(ಉಪಾಧ್ಯಕ್ಷರು), ಪ್ರಸಾದ್ ಕಡುಂಬು( ಪ್ರಧಾನ ಕಾರ್ಯದರ್ಶಿ), ರಾಜೇಶ್ ಪೆÇಡಿಪ್ಪಳ್ಳ, ಸುನಿಲ್ ಪುಂಡೂರು, ನ್ಯಾಯವಾದಿ ಜನಾರ್ದನ ಕುಳ, ಸುರೇಶ್ ವಿ.ಸಿ, ಕೃಷ್ಣ ಕಾಡಮನೆ(ಕಾರ್ಯದರ್ಶಿಗಳು), ಸದಾಶಿವ ಮೈಲುತೊಟ್ಟಿ (ಕೋಶಾಧಿಕಾರಿ), ಡಾ.ಶ್ರೀಧರ ಮಾಸ್ತರ್ ಏತಡ್ಕ, ರತೀಶ್ ಮಾಸ್ತರ್ ನೆಕ್ರಾಜೆ( ಲೆಕ್ಕ ಪತ್ರ ಪರಿಶೋಧಕರು) ಹಾಗೂ ಸದಸ್ಯರನ್ನು ಆರಿಸಲಾಯಿತು. ಗಂಗಾಧರ ಪಳ್ಳತ್ತಡ್ಕ ಸ್ವಾಗತಿಸಿ, ಪ್ರಸಾದ ಕಡುಂಬು ವಂದಿಸಿದರು. ಡಾ.ಶ್ರೀಧರ ಮಾಸ್ತರ್ ನಿರೂಪಿಸಿದರು.